ಮೈಸೂರು

ಹಿಂದೂ ಮುಸ್ಲಿಂ ಸ್ನೇಹ ಬಳಗದಿಂದ ಶ್ರೀಗಳ ಪುಣ್ಯಸ್ಮರಣೆ

ಮೈಸೂರು,ಜ.31:- ನಡೆದಾಡುವ ದೇವರು, ಶತಾಯುಷಿ ಸಿದ್ದಗಂಗಾಮಠದ ಡಾ.ಶ್ರೀ ಶಿವಕುಮಾರ ಸ್ವಾಮಿಗಳ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಹಿಂದೂ ಮುಸ್ಲಿಂ ಸ್ನೇಹ ಬಳಗದಿಂದ ಶ್ರೀಗಳ ಪುಣ್ಯಸ್ಮರಣೆ ಆಚರಿಸಲಾಯಿತು.

ನಗರದ ಮಹೇಂದ್ರ ಹೋಟೆಲ್ ಮುಂಭಾಗ ಸ್ಮರಣೆ ಕಾರ್ಯಕ್ರಮವನ್ನಿಂದು ಹಮ್ಮಿಕೊಳ್ಳಲಾಗಿದ್ದು, ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪ್ರಸಾದ ವಿತರಿಸಲಾಯಿತು. ಶ್ರೀಗಳ ಸ್ಮರಣೆ ಪ್ರಯುಕ್ತ ಸಾರ್ವಜನಿಕರಿಗೆ ಬಾತ್ ವಿತರಿಸಲಾಯಿತು.

ಹಿಂದೂ ಮುಸ್ಲಿಂ ಸ್ನೇಹ ಬಳಗದ ಟಿ.ಗೋಪಾಲ್, ಅಮ್ಜದ್ , ಮಧು,  ಶ್ರೀಕಾಂತ್, ಜೀ ಶಾನ್ ಮತ್ತಿತರು ಭಾಗಿಯಾಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: