ಸುದ್ದಿ ಸಂಕ್ಷಿಪ್ತ

ಫೆ.3ರಂದು ಸಾಮೂಹಿಕ ಸತ್ಯನಾರಾಯಣ ಪೂಜಾ

ಮೈಸೂರು,ಜ.31 : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜೆಪಿ.ನಗರದ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣಸ್ವಾಮಿ ಪೂಜೆ ಹಾಗೂ ಧಾರ್ಮಿಕ ಸಭೆಯನ್ನು ಫೆ.3ರ ಬೆಳಗ್ಗೆ 7 ಗಂಟೆಗೆ ಜೆ.ಪಿ.ನಗರದ ರಾಹುಲ್ ಕನ್ವೆಷನ್ ಹಾಲ್ ನಲ್ಲಿ ಏರ್ಪಡಿಸಲಾಗಿದೆ.

ಬೆಳಗ್ಗೆ 8 ರಿಂದ ಪೂಜೆಯ ಸಂಕಲ್ಪ, 8.30ರಿಂದ ಪೂಜೆ ಆರಂಭ, 10.30ಕ್ಕೆ ಮಹಾಪೂಜೆ, ನಂತರ ಧಾರ್ಮಿಕ ಸಭಾ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆಯನ್ನು ನಡೆಸಲಾಗುವುದು.

ಕಾಗಿನೆಲೆ ಶಾಖಮಠದ ಶ್ರೀಶಿವಾನಂದ ಪುರಿ ಸ್ವಾಮೀಜಿಯವರ ಸಾನಿದ್ಯ ವಹಿಸಲಿದ್ದಾರೆ, ಬಿಜೆಪಿ ಮುಖಂಡ ಹೆಚ್.ವಿ.ರಾಜೀವ್ ಅಧ್ಯಕ್ಷತೆ. ಮೇಯರ್ ಪುಷ್ಪಲತಾ ಜಗನ್ನಾಥ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಇನ್ನಿತರ ಗಣ್ಯರು ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: