Uncategorized

ಫೆ.3ರಂದು ಪಿಯು ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ

ಮೈಸೂರು,ಜ.31 : ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ, ಉಪನ್ಯಾಸಕರ ಸಂಘದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದವನ್ನು ಫೆ.3ರ ಬೆಳಗ್ಗೆ 10 ಗಂಟೆಗೆ, ಮೈವಿವಿಯ ಸೆನೆಟ್ ಭವನದಲ್ಲಿ ಏರ್ಪಡಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡುವರು. ಸಚಿವ ಸಾ.ರಾ.ಮಹೇಶ್ ರಿಂದ ಪುಸ್ತಕ ಬಿಡುಗಡೆ, ಶಾಸಕ ತನ್ವೀರ್ ಸೇಠ್, ಮರಿತಿಬ್ಬೇಗೌಡ, ಸಪ್ತಗಿರಿ ಕಾಲೇಜು ಆಫ್ ಇಂಜಿನಿಯರಿಂಗ್ ನ  ಜಿ.ಡಿ.ಮನೋಜ್ ಇರಲಿದ್ದಾರೆ. ಕ.ರಾ.ಪ.ಪೂ ಕಾಲೇಜು ಪ್ರಾಚಾರ್ಯರ ಸಂಘದ ಅಧ್ಯಕ್ಷ ಕೆ.ಟಿ.ಶ್ರೀಕಂಠೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ.ಪೂ.ಶಿ ಇ ಉಪನಿರ್ದೇಶಕ ಡಾ.ದಯಾನಂದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: