ಸುದ್ದಿ ಸಂಕ್ಷಿಪ್ತ

ಫೆ.2 ರಿಂದ ಗಣಿತ -ವಿಜ್ಞಾನ ಒಲಂಪಿಯಾಡ್ ವಿಜೇತರ ಸಮಾವೇಶ

ಮೈಸೂರು,ಜ.31 : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ 2018-19ನೇ ಸಾಲಿನ ರಾಜ್ಯಮಟ್ಟದ ‘ಗಣಿತ-ವಿಜ್ಞಾನ ಒಲಂಪಿಯಾಡ್ ವಿಜೇತರ ಸಮಾವೇಶ’ ಅನ್ನು ಫೆ.2 ಮತ್ತು 3ರಂದು ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಏರ್ಪಡಿಸಲಾಗಿದೆ.

ಫೆ.2ರ ಬೆಳಗ್ಗೆ 10 ಗಂಟೆಗೆ ಸಿಎಫ್ ಟಿ ಆರ್.ಐ ನಿರ್ದೇಶಕ ಡಾ.ರಾಘವರಾವ್ ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಉಪಾಧ್ಯಕ್ಷ ಪ್ರೊ.ಎಸ್.ಎಂ.ಗುರುನಂಜಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಘದ ಹಲವು ಪದಾಧಿಕಾರಿಗಳು ಇರಲಿದ್ದಾರೆ.

ಫೆ.3ರಂದು ಸಮಾರೋಪ ಸಮಾರಂಭ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಪ್ರಶಸ್ತಿ ವಿತರಿಸಲಿದ್ದಾರೆ. ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಶಾಸಕ ಎಲ್.ನಾಗೇಂದ್ರ ಮುಖ್ಯ ಅತಿಥಿಗಳಾಗಿರುವರು. (ಕೆ.ಎಂ.ಆರ್)

Leave a Reply

comments

Related Articles

error: