ಮೈಸೂರು

ಜಲಭವನ ಕಟ್ಟಡ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿದ ಒಳಚರಂಡಿ ಮಂಡಳಿಯ ಅಧ್ಯಕ್ಷ ಯಶವಂತರಾಯ ಪಾಟೀಲ್

ಮೈಸೂರು,ಫೆ.1:- ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾದ ಯಶವಂತರಾಯ ಪಾಟೀಲ್ ಅವರು, ವ್ಯವಸ್ಥಾಪಕ ನಿರ್ದೇಶಕರಾದ ಎನ್.ಜಯರಾಮ್ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಮೈಸೂರಿನ ಮುಖ್ಯ ಅಭಿಯಂತರರ ಕಛೇರಿಯಲ್ಲಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ನಿನ್ನೆ ನಡೆಸಿದರು.

ವಿವಿಧ ನಗರ/ ಪಟ್ಟಣಗಳಲ್ಲಿ ನಡೆಯುತ್ತಿರುವ ಯೋಜನೆಯಡಿ ಕೊಳವೆ ಮಾರ್ಗ ಅಳವಡಿಸಿದ ನಂತರ ರಸ್ತೆ ಪುನರ್‍ನಿರ್ಮಾಣದ ಬಗ್ಗೆ ಚರ್ಚಿಸಲಾಯಿತು. ಕಂದಕ ಅಗೆಯುವ ಸಂದರ್ಭದಲ್ಲಿ ಗ್ರೂವ್ ಕಟ್ಟಿಂಗ್ ಯಂತ್ರ ಉಪಯೋಗಿಸಿ ರಸ್ತೆ ಕತ್ತರಿಸಲು ಹಾಗೂ ವಿವಿಧ ಇಲಾಖೆಗಳೊಂದಿಗೆ ಸಮನ್ವಯದಿಂದ ಸಾರ್ವಜನಿಕರ ಆಸ್ತಿಗಳಿಗೆ ಹಾನಿಯಾಗದಂತೆ ಕೆಲಸ ನಿರ್ವಹಿಸಲು ಸಭೆಯಲ್ಲಿ ಸೂಚಿಸಿದರು. ಯಾವುದೇ ಯೋಜನೆಯನ್ನು ಆರಂಭಿಸುವ ಮುನ್ನ ಅಡತಡೆಗಳನ್ನು ಅಭ್ಯಸಿಸಿ ಅವುಗಳನ್ನು ನಿಗದಿತ ಅವಧಿಯೊಳಗೆ ಬಗೆಹರಿಸಿ ಯೋಜನೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಸೂಚಿಸಿದರು. ಯೋಜನೆಗಳಿಗೆ ತಗಲುವ ವೆಚ್ಚಕ್ಕೆ ಅನುಗುಣವಾಗಿ ಸಾರ್ವಜನಿಕರಿಗೆ ಸವಲತ್ತುಗಳು ತಲುಪುವ  ರೀತಿಯಲ್ಲಿ ಕಾರ್ಯ ನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಮಂಡಳಿ ವತಿಯಿಂದ ನಿರ್ವಹಿಸುತ್ತಿರುವ ನಗರ/ ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜಿನ ಅನಧಿಕೃತ ಸಂಪರ್ಕಗಳನ್ನು ಗುರುತಿಸಿ ಅವುಗಳನ್ನು ಅಧಿಕೃತಗೊಳಿಸಿ ಆದಾಯ ಬರುವ ರೀತಿಯಲ್ಲಿ ತೆರಿಗೆಯನ್ನು ವಸೂಲಾತಿ ಮಾಡಲು ಸೂಚಿಸಿದರು.

ಸಭೆಯ ನಂತರ ಇತರೆ ಅಧಿಕಾರಿಗಳೊಂದಿಗೆ ಮೈಸೂರಿನಲ್ಲಿ ನಡೆಯುತ್ತಿರುವ ಮಂಡಳಿಯ ಜಲಭವನ ಕಟ್ಟಡ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿ ಕಟ್ಟಡದ ವಿನ್ಯಾಸವನ್ನು ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಿದರು. ನಂತರ ವಿಧ್ಯಾರಣ್ಯಪುರಂನಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದರು.

ಹೊಂಗಳ್ಳಿ ನೀರು ಸರಬರಾಜು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಾನ್ಯ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ಮುಖ್ಯ ಅಭಿಯಂತರರು, ಆಯ್ಕೇಶ್ರೇಣಿ ಕಾರ್ಯಪಾಲಕ ಅಭಿಯಂತರರು, ನಗರಪಾಲಿಕೆ ಅಧಿಕಾರಿಗಳು ಮತ್ತು ಇತರೆ ಅಧಿಕಾರಿಗಳು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: