ಕರ್ನಾಟಕಪ್ರಮುಖ ಸುದ್ದಿ

ಎಲ್.ಇ.ಡಿ, ಎಲ್.ಸಿ.ಡಿ ಟಿವಿ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ

ಹಾಸನ (ಫೆ.1): ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಮಾರ್ಚ್ 18ರಿಂದ ಎಲ್.ಇ.ಡಿ ಮತ್ತು ಎಲ್.ಸಿ.ಡಿ ಟಿವಿ ಹಾಗೂ ವಿಶೇಷವಾಗಿ ಆಡಿಯೋ ಮತ್ತು ವಿಡಿಯೋ ರಿಪೇರಿ ತರಬೇತಿಯನ್ನು 30 ದಿನಗಳ ಕಾಲ ನಡೆಸಲಾಗುವುದು.

ಈ ತರಬೇತಿಯನ್ನು ನುರಿತ ಉಪನ್ಯಾಸಕರಿಂದ ಮಾಡಿಸಲಾಗುತ್ತದೆ. ಹಾಗೂ ತರಬೇತಿ ಸಂದರ್ಭದಲ್ಲಿ ಉದ್ಯಮಶೀಲತ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿಯನ್ನು ನೀಡಲಾಗುತ್ತದೆ. ಈ ತರಬೇತಿ ಪಡೆಯಲು ಆಸಕ್ತಿಯಿರುವಂತಹ 18 ರಿಂದ 45 ರ ವಯೋಮಿತಿಯ ನಿರುದ್ಯೋಗ ಯುವಕರು ನಮ್ಮ ಸಂಸ್ಥೆಗೆ ಅರ್ಜಿ ಸಲ್ಲಿಸಬಹುದು. ಈ ತರಬೇತಿಗಳು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ.

ಅರ್ಜಿಯನ್ನು ಸಲ್ಲಿಸುವವರು 116ಎ, ಸಂಖ್ಯೆ23, ಕೆ.ಐ.ಎ.ಡಿ.ಬಿ ಇಂಡಸ್ಟ್ರಿಯಲ್ ಗ್ರೋತ್ ಸೆಂಟರ್, ನೀರಿನ ಟ್ಯಾಂಕ್ ಹತ್ತಿರ, ಹೊಳೆನರಸೀಪುರ ರಸ್ತೆ, ಹಾಸನ 573201 ನಮ್ಮ ಸಂಸ್ಥೆಯಿಂದ ಅರ್ಜಿ ಪಡೆದು ನೇರವಾಗಿ ಸಂಸ್ಥೆಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ: 08172-297013, 7353654000, 8147903497, 7338358600 ಸಂಪರ್ಕಿಸಬಹುದು ಎಂದು ಕೆನರಾ ಬ್ಯಾಂಕ್ ಸ್ವ-ಉದ್ಯೋಗ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: