ಮೈಸೂರು

ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ

ಸಾವಿತ್ರಿಬಾಯಿ ಫುಲೆಯರವರ ಜನ್ಮದಿನದಂಗವಾಗಿ ಇತಿಹಾಸ ತಜ್ಞೆ ವಿಜಯಾ ಮಹೇಶ್ ಅವರಿಗೆ ರಾಜ್ಯಮಟ್ಟದ ಮಾತೆ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿಯನ್ನು ಈಚೆಗೆ ಜಿಲ್ಲೆಯ ವಾಜಮಂಗಲ ಗ್ರಾಮದಲ್ಲಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ಭಾರತೀಯ ಮಹಿಳಾ ಸಂಘ ಗ್ರಾಮದಲ್ಲಿ ಆಯೋಜಿತ್ತು. ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ವಿಜಯಾ ಮಹೇಶ್ ಅವರು  ಜ್ಯೋತಿ ಬಾಯಿ ಫುಲೆ ಹಾಗೂ ಸಾವಿತ್ರಿ ಬಾಯಿ ಫುಲೆ ಜನ್ಮ ದಿನದಂದು ಶಿಕ್ಷಕರ ದಿನಾಚರಣೆಯುನ್ನಾಗಿ ಆಚರಿಸಿದರೆ ಅರ್ಥಪೂರ್ಣವಾಗಿರುವುದು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಶಿಸಿದರು. ಜಾತಿ ಪದ್ಧತಿ, ವರ್ಣ ಪದ್ಧತಿಗಿಂತ ಸ್ತ್ರೀ ದೌರ್ಜನ್ಯ ಹೆಚ್ಚಾಗಿದ್ದ ಕಾಲದಲ್ಲಿಯೇ ಮಹಿಳಾ ಸಶಕ್ತೀಕರಣಕ್ಕಾಗಿ, ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಿದ ಅವರ ಹೋರಾಟ ಸದಾ ಆದರ್ಶಪ್ರಾಯ ಎಂದರು.

ಸಂಘದ ಲಕ್ಷ್ಮೀ ನಾಗರಾಜು, ಅಧ್ಯಕ್ಷೆ ಪ್ರತಿಮಾ ಶಿವಪ್ರಸಾದ್, ವಾಜಮಂಗಲ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಹೆಚ್.ಸಿ. ಲಾವಣ್ಯ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಕೆ. ಶಾಂತಿ ಉಪಸ್ಥಿತರಿದ್ದರು.

Leave a Reply

comments

Related Articles

error: