ಸುದ್ದಿ ಸಂಕ್ಷಿಪ್ತ

ನಾಳೆ ವಿದ್ಯುತ್ ನಿಲುಗಡೆ

ಮೈಸೂರು, ಫೆ.1:-  ಎನ್.ಆರ್. ಮೊಹಲ್ಲಾ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ 66/11 KV ಸೌತ್ (ಮೈಸೂರು) ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ. ಕೆ.ಎಂ.ಪಿ ಫೀಡರ್‍ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿರುತ್ತದೆ.

ಫೆಬ್ರವರಿ 2 ರಂದು ಬೆಳಿಗ್ಗೆ 10ರಿಂದ ಸಂಜೆ 6 ಘಂಟೆಯವರೆಗೆ ಅಶೋಕಪುರಂ 1ನೇ ಕ್ರಾಸ್‍ನಿಂದ 13ನೇ ಕ್ರಾಸ್‍ವರೆಗೆ, ಕೃಷ್ಣಮೂರ್ತಿ ಪುರಂ 1ನೇ ಕ್ರಾಸ್‍ನಿಂದ 6ನೇ ಕ್ರಾಸ್‍ವರೆಗೆ, ಸ್ಯಾಂಡಲ್‍ವುಡ್, ಬಲ್ಲಾಳ್ ಸರ್ಕಲ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ  ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ ಎಂದು ಎನ್.ಆರ್. ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: