ಮೈಸೂರು

ಮೈಸೂರು ವಾರಿಯರ್ಸ್ ಮತ್ತು ಕಲಿಸು ಫೌಂಡೇಷನ್ ಸಹಯೋಗದಲ್ಲಿ ನಿರ್ಮಿತವಾದ ಜ್ಞಾನಾಲಯ ಉದ್ಘಾಟಿಸಿದ ರಾಜವಂಶಸ್ಥ ಯದುವೀರ ಒಡೆಯರ್

ಮೈಸೂರು,ಫೆ.1:- ಮೈಸೂರು ವಾರಿಯರ್ಸ್  ಮತ್ತು  ಕಲಿಸು ಫೌಂಡೇಷನ್ ಸಹಯೋಗದಲ್ಲಿ ಹುಡ್ಕೋ ಬನ್ನಿಮಂಟಪ ಶಾಲೆಯ ವಿದ್ಯಾರ್ಥಿಗಳಿಗೆ ಜ್ಞಾನಾಲಯ ಆರಂಭಿಸಲಾಗಿದ್ದು, ಇಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟನೆ ನೆರವೇರಿಸಿದರು.

ಬಳಿಕ ಮಾತನಾಡಿದ ಯದುವೀರ್  ಅವರು ಮೈಸೂರು ವಾರಿಯರ್ಸ್ ಮತ್ತು ಎನ್.ಆರ್.ಸಮೂಹವು ತಮ್ಮ ಹಲವಾರು ಸಾಮಾಜಿಕ ಚಟುವಟಿಕೆಗಳ ಮತ್ತು ನವೀನ ಉಪಕ್ರಮಗಳ ಮೂಲಕ ಮೈಸೂರಿನಾದ್ಯಂತ ಬದಲಾವಣೆಯನ್ನು ತರಲು ಶ್ರಮಿಸುತ್ತಿದೆ. ಈ ಎರಡೂ ಸಂಸ್ಥೆಗಳ ಸಹಯೋಗದಲ್ಲಿ ಈಗಾಗಲೇ ಐದು ಜ್ಞಾನಾಲಯವನ್ನು ನಿರ್ಮಿಸಲಾಗಿದ್ದು, ಇದು 6ನೇ ಜ್ಞಾನಾಲಯವಾಗಿದೆ. ಬಡ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ಇಂತಹ ಸಮಾಜಮುಖಿ ಉಪಕ್ರಮಗಳನ್ನು ನಡೆಸುತ್ತಿರುವ ಕಲಿಸು ಫೌಂಡೇಷನ್ ಮತ್ತು ವಾರಿಯರ್ಸ್ ತಂಡಗಳನ್ನು ಅಭಿನಂದಿಸುತ್ತೇನೆ ಎಂದರು. ಇದೇ ವೇಳೆ ಜ್ಞಾನಾಲಯವನ್ನು ಶಾಲೆಯ ಪ್ರಾಚಾರ್ಯರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭ ಮೈಸೂರು ವಾರಿಯರ್ಸ್ ಮಾಲೀಕ, ಎನ್.ಆರ್.ಸಮೂಹ ಸಂಸ್ಥೆಯ ಪಾಲುದಾರರಾದ ಪವನ್ ರಂಗ, ಕಲಿಸು ಫೌಂಡೇಷನ್ನಿನ ಸಿಇಒ ನಿಖಿಲೇಶ್ ಎಂ.ಎಂ, ಬಿಇಒ ಉದಯ್ ಕುಮಾರ್, ಶಾಲಾ ಪ್ರಾಚಾರ್ಯರಾದ ಶಾರದಾ ಕೆ.ಆರ್. ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: