ಪ್ರಮುಖ ಸುದ್ದಿಮೈಸೂರು

ಫೆ.3ರಂದು ಸಂವಿಧಾನ ಓದು ಅರಿವಿನ ಪಯಣ

ಮೈಸೂರು,ಫೆ.1 : ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ, ಸಂವಿಧಾನ ಓದು ಸಮಿತಿ ಜಂಟಿಯಾಗಿ ‘ಸಂವಿಧಾನ ಓದು ಅರಿವಿನ ಪಯಣ’ ಕಾರ್ಯಕ್ರಮವನ್ನು ಫೆ.3ರಂದು ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ವಿಸ್ತರಣ ಕೇಂದ್ರದ ಡಾ.ಎಸ್.ನರೇಂದ್ರಕುಮಾರ್ ತಿಳಿಸಿದರು.

ಮೈಸೂರು ಪ್ರಧಾನ ಜಿಲ್ಲಾ ಸತ್ರ ನ್ಯಾಯಾದೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾಯಮೂರ್ತಿ ಸುರೇಶ್ ಕೆ.ಒಂಟಿಗೋಡಿ ಅವರು ಉದ್ಗಾಟಿಸಲಿದ್ದಾರೆ. ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರು ಮುಖ್ಯ ಭಾಷಣ ಮಾಡುವರು, ಮೈವಿವಿಯ ಕುಲಸಚಿವ ಪ್ರೊ.ಆರ್.ರಾಜಣ್ಣ ಅಧ್ಯಕ್ಷತೆ ವಹಿಸಲಿದ್ದು, ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್ ಮತ್ತು ಬೆಂಗಳೂರಿನ ಮಹಿಳಾ ಜನವಾದಿ ಸಂಘಟನೆಯ ಕೆ.ಎಸ್.ವಿಮಲ ಭಾಗವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂವಿಧಾನ ಓದು ಸಮಿತಿಯ ಪ್ರೊ.ಪಂಡಿತಾರಾದ್ಯ ಅವರು ಮಾತನಾಡಿ, ದೇಶದ ಮಹಿಳೆಯರನ್ನೂ ಒಳಗೊಂಡಂತೆ, ರೈತರು, ದಲಿತರು, ಶ್ರಮಜೀವಿಗಳು, ಧಾರ್ಮಿಕ ಅಲ್ಪಸಂಖ್ಯಾತರು, ಬುಡಕಟ್ಟು ಹಾಗೂ ಅಲೆಮಾರಿ ಸಮುದಾಯಗಳ ಪಾಲಿಗೆ ಸಂವಿಧಾನ ಹಕ್ಕುಗಳು ಪೂರ್ಣವಾಗಿ ದಕ್ಕಿಲ್ಲ ಸಂವಿಧಾನದ ಮೂಲ ಆಶಯಗಳ ಬಗೆಗೆ ಸರಿಯಾದ ತಿಳುವಳಿಕೆಯು ಇಲ್ಲದೇ ಇರುವುದು ದುರಂತವಾಗಿದ್ದು, ಆದ್ದರಿಂದ ಜಾಗೃತಿಗಾಗಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.

ಪಿ.ಶಂಭಯ್ಯ, ವರದಯ್ಯ, ವಸಂತ ಕಲಾಲ್ ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: