ಕರ್ನಾಟಕ

ಬೆಂಗಳೂರಿನಲ್ಲಿ ಇಂಡಿಗೋ ವಿಮಾನಗಳ ನಿರ್ವಹಣಾ ಘಟಕ

ಬೆಂಗಳೂರು,ಫೆ.1-ಇಂಡಿಗೋ ವಿಮಾನಗಳ ನಿರ್ವಹಣಾ ಘಟಕವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಾಪನೆ ಮಾಡಲಾಗುತ್ತಿದೆ.

ಘಟಕವನ್ನು ಸ್ಥಾಪಿಸಲು ಬಿಐಎಎಲ್ ಮತ್ತು ದೇಶದ ಅತಿ ದೊಡ್ಡ ದೇಶೀಯ ಏರ್ಲೈನ್ಸ್ ಕಂಪನಿ ಇಂಡಿಗೋ ಅನ್ನು ನಿರ್ವಹಿಸಲು ಇಂಟರ್ಗ್ಲೋಬ್ ಏವಿಯೇಷನ್ ಲಿಮಿಟೆಡ್ ನಿರ್ವಹಿಸುವ ಇಂಟರ್ಗ್ಲೋಬ್ ಏವಿಯೇಷನ್ ಲಿಮಿಟೆಡ್ ಒಪ್ಪಂದ ಮಾಡಿಕೊಂಡಿದೆ.

ನಿಲ್ದಾಣವೂ ಪ್ರಮುಖ ಸ್ಥಳವಾಗಿದ್ದು, ವಿಮಾನಯಾನ ಕ್ಷೇತ್ರದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಇದೇ ಕಾರಣಕ್ಕೆ ದಕ್ಷಿಣ ಭಾರತದ ಅತ್ಯಂತ ಪ್ರಮುಖವಾದ ನಿರ್ವಹಣೆ ಘಟಕವನ್ನು ಸ್ಥಾಪಿಸುತ್ತಿದ್ದೇವೆ 2020ರ ವೇಳೆಗೆ ಘಟಕ ಆರಂಭಗೊಳ್ಳಲಿದೆ ಎಂದು ಇಂಡಿಗೋ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವೋಲ್ಫ್ಗ್ರ್ಯಾಂಗ್ ಪ್ರಾಕ್ ಶೂವರ್ ತಿಳಿಸಿದ್ದಾರೆ.

ಕೆಂಪೇಗೌಡ ವಿಮಾನ ನಿಲ್ದಾಣದ ಆವರಣದಲ್ಲಿನ 5 ಎಕರೆ ಜಾಗವನ್ನು 20 ವರ್ಷಗಳ ಅವಧಿಗೆ ಉಪ ಗುತ್ತಿಗೆಗೆ ಕೊಡುವ ಒಪ್ಪಂದವಾಗಿದೆ. 13 ಸಾವಿರ ಚದರ ಮೀಟರ್ ಜಾಗದಲ್ಲಿ ಸುಸಜ್ಜಿತವಾದ ಘಟಕದಲ್ಲಿ 2 ಮಾಧಯಮ ಗಾತ್ರದ ವಿಮಾನಗಳನ್ನು ನಿಲುಗಡೆ ಮಾಡಬಹುದು.

ಶೀಘ್ರ ಎಂಜಿನ್ ಬದಲಾವಣೆ ವಿಭಾಗ, ಅದಕ್ಕೆ ಸಂಬಂಧಿಸಿದ ಗೋದಾಮು, ರಿಪೇರಿ ಮತ್ತು ನಿರ್ವಹಣೆ ಸಂಬಂಧಿಸಿದ ಮೂಲಸೌಕರ್ಯ ಹಾಗೂ ಎಂಜಿನಿಯರಿಂಗ್ ಕಚೇರಿಗಳು ಇರಲಿದೆ. (ಎಂ.ಎನ್)

 

Leave a Reply

comments

Related Articles

error: