ಸುದ್ದಿ ಸಂಕ್ಷಿಪ್ತ

ಪ್ರೌಢಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಾಳೆ

ಮೈಸೂರು,ಫೆ.1 : ಮೈಸೂರು ವಿಶ್ವವಿದ್ಯಾಲಯ ಸ್ಥಾಪಿಸಿರುವ ಶಾಲೆಗಳಲ್ಲಿ ವಿಜ್ಞಾನ ಅಭಿವೃದ್ಧಿ ಸಮಿತಿಯು ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕಲಿಕಾ ಆಸಕ್ತಿ ಮೂಡಿಸುವ ದೃಷ್ಟಿಯಿಂದ ಪ್ರತಿ ತಿಂಗಳ ಮೊದಲನೇ ಶನಿವಾರ ಅಪರಾಹ್ನ 2 ಗಂಟೆಯಿಂದ 4ರವರಗೆ ವಿಜ್ಞಾನ ವಿವಿಧ ಕ್ಷೇತ್ರಗಳ ಪರಿಣಿತರ ಜೊತೆಗೆ ಸಂವಾದವನ್ನು ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಏರ್ಪಡಿಸಲಾಗಿದೆ.

ಅದರಂತೆ ಫೆ.2ರಂದು ನಡೆಯುವ ಕಾರ್ಯಕ್ರಮದಲ್ಲಿ ನಿವೃತ ಪ್ರಾಧ್ಯಾಪಕರಾದ ಪ್ರೊ.ಗೋಪಾಲರಾವ್, ಪ್ರೊ.ರವೀಶ್, ಪ್ರಾಧ್ಯಾಪಕರಾದ ಪ್ರೊ.ಕೆ.ಎಸ್.ಮಲ್ಲೇಶ್, ಪ್ರೊ.ವಿಶ್ವನಾಥ್, ಪ್ರೊ.ಜನಾರ್ದನ್, ಪ್ರೊ.ರಮೇಶ್, ಡಾ.ರಂಗರಾಜನ್, ನಿವೃತ್ತ ವಿಜ್ಞಾನಿ ಡಾ.ಭಾಗ್ಯಲಕ್ಷ್ಮಿ ಇವರುಗಳು ಪಾಲ್ಗೊಳ್ಳಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: