ಮೈಸೂರು

ಫೆ.16 ರಿಂದ ವಿದ್ಯಾರ್ಥಿ ಸಂಸ್ಕೃತಿ ಚಳುವಳಿ

ಮೈಸೂರು,ಫೆ.1 : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಎಬಿವಿಪಿ ಕರ್ನಾಟಕ ವತಿಯಿಂದ ರಾಜ್ಯಮಟ್ಟದ ‘ವಿದ್ಯಾರ್ಥಿ ಸಂಸ್ಕೃತಿ ಚಳುವಳಿ’ಯನ್ನು ಫೆ.16,17ರಂದು ಕೆಎಸ್ಓಯು ಆವರಣದಲ್ಲಿ ನಡೆಸಲಾಗುವುದು.

ರಾಜ್ಯದ ಎಲ್ಲಾ ಸೃಜನಶೀಲ ಕಾಲೇಜುಗಳ ಸೃಜನಶೀಲ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ವಿನೂತನ ವಿದ್ಯಾರ್ಥಿ ಸಂಸ್ಕೃತಿ ಚಳುವಳಿಯನ್ನು ಕಟ್ಟಬೇಕಾಗಿದೆ.

ಚಳುವಳಿಯಲ್ಲಿ ಏಕಾಂಕ ನಾಟಕ, ರೂಪಕ, ಬೀದಿ ನಾಟಕ, ಸಮೂಹನೃತ್ಯ, ಸಮೂಹಗೀತೆ, ಸಮೂಹ ಚಿತ್ರ ಮೊದಲಾದ ಸಮೂಹದ ಒಗ್ಗಟ್ಟಿನ ಸ್ಪರ್ಧೆಗಳಿಂದ ಹಿಡಿದು ಚರ್ಚಾ, ಭಾಷಣ, ಪ್ರಬಂಧ ಸ್ಪರ್ಧೆಗಳು, ಸ್ವರಚಿತ ಕವನ ವಾಚನ ಸ್ಪರ್ಧೆಗಳು ಸೇರಿದಂತೆ ವ್ಯಕ್ತಿಗತವಾದ ಪ್ರತಿಭಾ ಪ್ರದರ್ಶನದವರೆಗೆ ಹಲವು ಪ್ರದರ್ಶನಗಳನ್ನು ಒಳಗೊಂಡಿದೆ ಎಂದು ನಗರ ಕಾರ್ಯದರ್ಶಿ ಗೌತಮ್, ಅಧ್ಯಕ್ಷ ಮಹದೇವ ಪ್ರಸಾದ್ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: