ಪ್ರಮುಖ ಸುದ್ದಿ

ಬಜೆಟ್ ಚುನಾವಣಾ ಗಿಮಿಕ್ : ಟಾಟು ಮೊಣ್ಣಪ್ಪ ಟೀಕೆ

ರಾಜ್ಯ(ಮಡಿಕೇರಿ) ಫೆ.2:  – ಪ್ರಧಾನಮಂತ್ರಿ ನರೇಂದ್ರಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಮಂಡಿಸಿರುವ ಮಧ್ಯಂತರ ಬಜೆಟ್ ಚುನಾವಣಾ ಗಿಮಿಕ್ ಅಷ್ಟೇ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಎಸ್.ಟಾಟು ಮೊಣ್ಣಪ್ಪ ಟೀಕಿಸಿದ್ದಾರೆ.

ಬಿಜೆಪಿಯ ಚುನಾವಣಾ ಪ್ರಣಾಳಿಕೆಯಂತೆ ಕಂಡು ಬರುತ್ತಿರುವ ಈ ಬಜೆಟ್‍ಗೆ ದೇಶದ ಜನ ಮರುಳಾಗುವುದಿಲ್ಲ, ಕಳೆದ ನಾಲ್ಕೂವರೆ ವರ್ಷಗಳಿಂದ ರೈತರ ಬಗ್ಗೆ ಕಾಳಜಿ ಇಲ್ಲದ ಸರ್ಕಾರ ಇದೀಗ ಮತಬ್ಯಾಂಕ್‍ಗಾಗಿ ರೈತರ ಪರ ಮೊಸಳೆ ಕನಿಕರ ತೋರಿದೆ. ಇಂದು ಬಜೆಟ್ ಮಂಡನೆಯಾದರೂ ಅದು ಕಾರ್ಯರೂಪಕ್ಕೆ ಬರುವುದು ಏ.1 ರಿಂದ. ಆದರೆ ಏಪ್ರಿಲ್‍ನಲ್ಲೇ ಚುನಾವಣೆ ಘೋಷಣೆಯಾಗುವ ಸಾಧ್ಯತೆಗಳಿದ್ದು, ಸರ್ಕಾರದ ಭರವಸೆಗಳು ಈಡೇರುವುದಿಲ್ಲ. ಈ ಹಿಂದೆ ಇದೇ ರೀತಿಯ ಭರವಸೆಗಳನ್ನು ನೀಡಿ ಕೇಂದ್ರ ಸರ್ಕಾರ ಜನರನ್ನು ಮೂರ್ಖರನ್ನಾಗಿ ಮಾಡಿತ್ತು ಎಂದು ಟಾಟೂಮೊಣ್ಣಪ್ಪ ಆರೋಪಿಸಿದ್ದಾರೆ.

ಕೇವಲ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಜೆಟ್‍ನಲ್ಲಿ ಮಧ್ಯಮ ವರ್ಗವನ್ನು ನಿರ್ಲಕ್ಷಿಸಲಾಗಿದೆ ಎಂದು ಟೀಕಿಸಿದ್ದಾರೆ.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: