ಮೈಸೂರು

ಎಟಿಐ ಪ್ರಶಿಕ್ಷಣಾರ್ಥಿಗಳಿಂದ ಪಾರಂಪರಿಕ ನಡಿಗೆ

ಮೈಸೂರು ,ಫೆ.2:- ಆಡಳಿತ ತರಬೇತಿ ಸಂಸ್ಥೆಯ 176 ಹಾಗೂ 177 ನೇ ಸಾಮಾನ್ಯ ಬುನಾದಿ ತರಬೇತಿ ತಂಡಗಳ ಪ್ರಶಿಕ್ಷಣಾರ್ಥಿಗಳು ಇಂದು ಬೆಳಿಗ್ಗೆ ನಗರದ ಪ್ರಮುಖ ಬೀದಿಗಳಲ್ಲಿ ಪಾರಂಪರಿಕ ನಡಿಗೆ ಕೈಗೊಂಡು, ಐತಿಹಾಸಿಕ ಮತ್ತು ಪಾರಂಪರಿಕ ಸ್ಥಳಗಳ ಮಹತ್ವದ ಮಾಹಿತಿ ಪಡೆದರು.

ಬೆಳಿಗ್ಗೆ 7 ಗಂಟೆಗೆ ರಂಗಾಚಾರ್ಲು ಸ್ಮಾರಕ ಪುರಭವನದಿಂದ ಪಾರಂಪರಿಕ ನಡಿಗೆ ಆರಂಭಿಸಿದ ಪ್ರಶಿಕ್ಷಣಾರ್ಥಿಗಳು ಸಿಲ್ವರ್ ಜ್ಯುಬಿಲಿ, ಗಡಿಯಾರ ಗೋಪುರ, ಫ್ರೀ ಮೇಸನ್ಸ್ ಕ್ಲಬ್,ಚಾಮರಾಜೇಂದ್ರ ವೃತ್ತ,ಅಂಬಾವಿಲಾಸ ಅರಮನೆ,ಕೃಷ್ಣರಾಜೇಂದ್ರ ವೃತ್ತ, ದೇವರಾಜ ಮಾರುಕಟ್ಟೆ, ಕೃಷ್ಣರಾಜೇಂದ್ರ ಆಸ್ಪತ್ರೆ, ಮೈಸೂರು ಮೆಡಿಕಲ್ ಕಾಲೇಜು ಮಾರ್ಗಗಳಲ್ಲಿ ಸಂಚರಿಸಿದರು.

ಪ್ರೊ.ರಂಗರಾಜು, ಹಿರಿಯ ಪತ್ರಕರ್ತ ಈಚನೂರು ಕುಮಾರ್, ಇತಿಹಾಸದ ಮಹತ್ವದ ಸಂಗತಿಗಳನ್ನು ವಿವರಿಸಿದರು.

ಈ ಸಂದರ್ಭ ತರಬೇತಿ ಸಂಯೋಜನಾಧಿಕಾರಿಗಳಾದ ಡಾ.ಹರೀಶ್, ಡಾ.ಕ್ರಿಸ್ಟಿನಾ ಕಾಂತರಾಜು ಮತ್ತಿತರರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: