ಮೈಸೂರು

ಲಲಿತ ಕಲಾ ಕಾಲೇಜಿಗೆ ಯಾವುದೇ ಪ್ರೋತ್ಸಾಹ, ಸೌಕರ್ಯ ನೀಡಲು ಸಿದ್ಧ : ಪ್ರೊ.ಆರ್.ರಾಜಣ್ಣ

ಮೈಸೂರು,ಫೆ.2:- ಸಂಸ್ಕೃತಿ-ಪರಂಪರೆಯನ್ನು ಉಳಿಸಿ ಬೆಳೆಸುವುದನ್ನು ಕಲಿಸುವ ಲಲಿತ ಕಲಾ ಕಾಲೇಜಿಗೆ  ಯಾವುದೇ ಪ್ರೋತ್ಸಾಹ, ಸೌಕರ್ಯ ನೀಡಲು ಸಿದ್ಧರಿದ್ದೇವೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಆರ್.ರಾಜಣ್ಣ ತಿಳಿಸಿದರು.

ಅವರಿಂದು ಮೈಸೂರು ವಿಶ್ವವಿದ್ಯಾನಿಲಯದ ಲಲಿತಕಲಾ ಕಾಲೇಜಿನಲ್ಲಿ ವಿಶೇಷ ಕೂಚುಪುಡಿ ನೃತ್ಯದ ಪ್ರಾತ್ಯಕ್ಷಿಕೆ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮೈಸೂರು ವಿಶ್ವವಿದ್ಯಾನಿಲಯದ ಲಲಿತಕಲಾ ಕಾಲೇಜಿಗೆ ತನ್ನದೇ ಆದ ಇತಿಹಾಸವಿದೆ.  ಮೈಸೂರು ಸಾಂಸ್ಕೃತಿಕವಾಗಿ ಬಹಳ ಪ್ರಸಿದ್ಧಿ ಪಡೆದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಯಾಗಿ ಸಂಗೀತ, ನೃತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ. ಮೈಸೂರು ಮಹಾರಾಜರುಗಳು ಸಂಗೀತಕ್ಕೆ ಹೆಚ್ಚಿನ ಸಮಯ ಮೀಸಲಿಟ್ಟಿದ್ದರು. ಸಂಗೀತ, ಇತಿಹಾಸದ ಬಗ್ಗೆ ಸಂಶೋಧನೆಗಳು ನಡೆದಿವೆ ಎಂದರು. ಇಲ್ಲಿನ ವಿದ್ಯಾರ್ಥಿಗಳು ಪರಂಪರೆಯನ್ನು ಉಲೀಸಿಕೊಂಡು ಹೋಗುತ್ತಿದ್ದಾರೆ. ಯಾವುದೇ ಸಭೆ, ಸಮಾರಂಭಗಳಿದ್ದರೂ ಲಲಿತಕಲಾ ಕಾಲೇಜಿನ ವಿದ್ಯಾರ್ಥಿಗಳ ಪ್ರಾರ್ಥನೆಯಿರಲೇಬೇಕು. ಅಂತಹ ಉತ್ತಮ ಪರಂಪರೆ ಈ ಕಾಲೇಜಿನಲ್ಲಿದೆ. ಈ ಕಾಲೇಜಿಗೆ ಪ್ರೋತ್ಸಾಹ ನೀಡಲು, ಅಗತ್ಯ ಸೌಕರ್ಯ ಕಲ್ಪಿಸಲು ಕಾರ್ಯಗತವಾಗಿದ್ದೇವೆ ಎಂದು ತಿಳಿಸಿದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಡಾ.ಸಂಜಯ್ ಶಾಂತರಾಮ್ ಮತ್ತು ತಂಡದವರು ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಸಂದರ್ಭ ಪ್ರಾಂಶುಪಾಲರಾದ ಡಾ.ಸಿ.ರಾಮಸ್ವಾಮಿ, ಸಂಗೀತ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಸಿ.ಎ.ಶ್ರೀಧರ್, ಡಾ.ಎಂ.ಮಂಜುನಾಥ್, ನೃತ್ಯವಿಭಾಗದ ಸಹಪ್ರಾಧ್ಯಾಪಕರಾದ ಡಾ.ಕೆ.ಕುಮಾರ್ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: