ದೇಶ

ಅನುಮತಿಯಿಲ್ಲದೆ ಮುದ್ರಿತವಾದ ಪ್ರಧಾನಿ ಭಾವಚಿತ್ರ : ಸ್ಪಷ್ಟನೆ

ಖಾದಿ ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) 2017ನೇ ಸಾಲಿನ ನೂತನ ದಿನದರ್ಶಿಕೆಯ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರ ಮುದ್ರಿತಗೊಂಡು ಸಾರ್ವಜನಿಕ ವಲಯ ಸೇರಿದಂತೆ ವಿರೋಧ ಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿದ್ದ ಕೆವಿಐಸಿ ನಡೆಗೆ ಪ್ರಧಾನ ಮಂತ್ರಿಗಳ ಕಚೇರಿಯು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ ಸಚಿವಾಲಯದಿಂದ ಸ್ಪಷ್ಟನೆ ಕೋರಿದೆ.

ಈ ಬಗ್ಗೆ ವಿರೋಧ ಪಕ್ಷದ ಮುಖಂಡರಾದ ರಾಹುಲ್‍ ಗಾಂಧಿ,  ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಕಟುವಾಗಿ ಟೀಕಿಸಿದ್ದರು.

ಪ್ರಧಾನಿಯವರ ಅನುಮತಿಯಿಲ್ಲದೆ ಮೋದಿಯವರ ಭಾವಚಿತ್ರವನ್ನು ಮುದ್ರಿಸಲಾಗಿದ್ದು ಆಯೋಗದ ನಡೆ ಬಗ್ಗೆ ಮೋದಿಯವರ ಅಸಂತೋಷವನ್ನು ವ್ಯಕ್ತಪಡಿಸಿದ್ದಾರೆ.  ಪ್ರಧಾನಿಯರವರನ್ನು ಸಂತುಷ್ಟಗೊಳಿಸಲು ಕೆಲವರು ಸ್ವಪ್ರೇರಣೆಯಿಂದ ಇಂಥ ಕೆಲಸ ಮಾಡುತ್ತಿರುವುದು ಹೊಸದೇನಲ್ಲವೆಂದು ಕಚೇರಿಯ ಉನ್ನತ ಮೂಲಗಳು ಸ್ಪಷ್ಟನೆ ನೀಡಿದ್ದು ಇದಕ್ಕೂ ಪ್ರಧಾನಿಯವರಿಗೂ ಸಂಬಂಧವಿಲ್ಲವೆಂದು ವಿಷಯವನ್ನು ತಳ್ಳಿ ಹಾಕಿದ್ದಾರೆ.

 

Leave a Reply

comments

Related Articles

error: