ದೇಶಪ್ರಮುಖ ಸುದ್ದಿ

ಅಧಿಕೃತವಾಗಿ ಕಾಂಗ್ರೆಸ್‍ ಸೇರಿದ ನವಜೋತ್‍ ಸಿಂಗ್ ಸಿಧು : ಅಕಾಲಿದಳದ ವಿರುದ‍್ಧ ವಾಗ್ದಾಳಿ

ನವದೆಹಲಿ: ಇತ್ತೀಚೆಗೆ ಬಿಜೆಪಿ ತೊರೆದು ಪ್ರತ್ಯೇಕ ಪಾರ್ಟಿ ಬೆಳೆಸುವ ಇಂಗಿತ ವ್ಯಕ್ತಪಡಿಸಿದ್ದ ಮಾಜಿ ಕ್ರಿಕೆಟಿಗ ನವಜ್ಯೋತ್ ಸಿಂಗ್ ಸಿಧು ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.

ಭಾನುವಾರ ನವದೆಹಲಿಯ ತಮ್ಮ ನಿವಾಸಕ್ಕೆ ಆಗಮಿಸಿ ಪಕ್ಷ ಸೇರುವ ಕುರಿತು ಮಾತನಾಡಿದ ಸಿಧು ಅವರನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಿದ್ದರು. ಸೋಮವಾರ ಕಾಂಗ್ರೆಸ್‍ ನಾಯಕರು ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಿಧು ಅವರನ್ನು ಮತ್ತೊಮ್ಮೆ ಪಕ್ಷಕ್ಕೆ ಅಧಿಕೃತವಾಗಿ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಸಿಧು, ನಾನು ಹುಟ್ಟು ಕಾಂಗ್ರೆಸಿಗ. ಪಕ್ಷಕ್ಕೆ ಮರಳಿರುವುದು ನನಗೆ ಘರ್’ವಾಪ್ಸಿ ಅನುಭವವಾಗಿದೆ ಎಂದರು.

ಅಕಾಲಿ ದಳದ ವಿರುದ‍್ಧ ವಾಗ್ದಾಳಿ :  

ಕಾಂಗ್ರೆಸ್ ಸೇರ್ಪಡೆಯಾದ ನಂತರ ಮಾತನಾಡಿದ ಸಿಧು, ಪಂಚಾಬ್‍ನಲ್ಲಿ ಆಡಳಿತಾರೂಢ ಅಕಾಲಿದಳದ ಮುಖ್ಯಮಂತ್ರಿಯಾಗಿರುವ ಪ್ರಕಾಶ್‍ ಸಿಂಗ್‍ ಬಾದಲ್‍ ಮತ್ತು ಆಡಳಿತದಲ್ಲಿ ಅವರ ಕುಟುಂಬದ ಹಸ್ತಕ್ಷೇಪದ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ ಸಿಧು, ಬಿಜೆಪಿಗೆ ಪಂಜಾಬ್‍ನ ಹಿತಕ್ಕಿಂತ ಮೈತ್ರಿಪಕ್ಷದ ಹಿತವೇ ಮುಖ್ಯವಾಗಿದೆ ಎಂದರು.

ಆಮ್ ಆದ್ಮಿ ಪಕ್ಷವನ್ನು ಯಾಕೆ ಸೇರಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಧು, ಆಮ್‍ಆದ್ಮಿ ಪಕ್ಷಕ್ಕೆ ನಾನು ಚುನಾವಣೆಗೆ ಸ್ಪರ್ಧಿಸುವುದು ಬೇಕಾಗಿಲ್ಲ. ಪಕ್ಷವೊಂದರ ಪ್ರಚಾರವಸ್ತು ಆಗಲು ನಾನು ಇಷ್ಟಪಡುವುದಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೆ ಪಂಜಾಬ್‍ಗಾಗಿ ನಾನು ಹೋರಾಡುವುದು ಹೇಗೆ ಎಂದು ಮರುಪ್ರಶ್ನೆ ಎಸೆದರು.

Leave a Reply

comments

Related Articles

error: