ಕರ್ನಾಟಕ

ಸಾವಯವ ಗೊಬ್ಬರ ಉತ್ಪಾದಿಸುವ ಘಟಕ ಸ್ಥಾಪನೆ: ಡಿ.ಸಿ ರೋಹಿಣಿ ಸಿಂಧೂರಿ

ಹಾಸನ (ಫೆ.2): ಪ್ರತೀ ದಿನ ಹಾಸನ ನಗರಸಭೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ 65ರಿಂದ 70ಟನ್ ಘನ ತ್ಯಾಜ್ಯವನ್ನು ಉಪಯೋಗಿಸಿ ಆಧುನಿಕ ಪೈರಾಲಿಸಿಸ್ಸ್ ತಂತ್ರಜ್ಞಾನದ ಮೂಲಕ, ವಿದ್ಯುತ್, ಡೀಸಲ್ ಮತ್ತು ಸಾವಯವ ಗೊಬ್ಬರನ್ನು ಉತ್ಪಾದಿಸುವ ಘಟಕವನ್ನು ಅಗಿಲೆ ನೆಲಭರ್ತಿ ಜಾಗದಲ್ಲಿ ಸ್ಥಾಪಿಸಲು ಸರ್ಕಾರದಿಂದ ಅನುಮೋದನೆ ಪಡೆಯುವ ಷರತ್ತಿಗೆ ಒಳಪಟ್ಟು ನಗರಸಭೆಯಿಂದ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ನಗರಸಭೆ ಅಡಳಿತಾಧಿಕಾರಿಗಳಾದ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

ನಗರಸಭೆಯ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ, ಬೇರ್ಪಡಿಸದ ಘನ ತ್ಯಾಜ್ಯದಿಂದ ಪರಿಸರಕ್ಕೆ ಯಾವುದೇ ಹಾನಿ ಇಲ್ಲದೇ ವಿದ್ಯುತ್‍ಚ್ಚಕ್ತಿ, ಸಿಂತೆಟಿಕ್ ಡೀಸಲ್, ಸಾವಯವ ಗೊಬ್ಬರ ಮತ್ತು ಗ್ರೇವಾಟರ್ (ಬೂದಿ ಮಿಶ್ರಿತ ನೀರು) ಉತ್ಪಾದನೆ ಮಾಡಲು ಮುಂದೆ ಬಂದಿರುತ್ತಾರೆ.

ನಗರಸಭೆ ವ್ಯಾಪ್ತಿಯಲ್ಲಿ ಒಂದು ದಿನ ಉತ್ಪತ್ತಿಯಾಗುವ ತ್ಯಾಜ್ಯದಿಂದ, ಸುಮಾರು 10ಸಾವಿರ ಲೀಟರ್ ಸಿಂಥೆಟಿಕ್ ಡೀಸಲ್ ಮತ್ತು 48ಸಾವಿರ ಯುನಿಟ್ ವಿದ್ಯುತ್‍ಚ್ಚಕ್ತಿಯನ್ನು ಉತ್ಪತ್ತಿ ಮಾಡಲಾಗುವುದು. ಈ ಘಟಕ ಸ್ಥಾಪಿಸಲು ಕಂಪನಿಯು ಸುಮಾರು ರೂ.100/- ಕೋಟಿಗಳಷ್ಟು ಬಂಡವಾಳವನ್ನು ಹೂಡಬೇಕಾಗುತ್ತದೆ. ನಗರಸಭೆಯಿಂದ ಅಥವಾ ಸರ್ಕಾರದಿಂದ ಯಾವುದೇ ಹಣಕಾಸಿನ ನೆರವನ್ನು ಕಂಪನಿಯವರಿಗೆ ನೀಡಲಾಗುವುದಿಲ್ಲ. ಹಾಸನ ನಗರಸಭೆ ಈ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಳ್ಳಲು ಮುಂದೆ ಬಂದಿರುವ ದೇಶದ ಮೊದಲ ನಗರ ಸ್ಥಳೀಯ ಸಂಸ್ಥೆ ಆಗಿದೆ.

ನಗರಸಭೆಯಿಂದ ಅಗಿಲೆ ನೆಲಭರ್ತಿ ಜಾಗದಲ್ಲಿ ಸುಮಾರು 2ಎಕರೆಯಷ್ಟು ಜಮೀನನ್ನು ಬಾಡಿಗೆ ರೂಪದಲ್ಲಿ ನೀಡಲಾಗುವುದು. ವಿದ್ಯುತ್ ಮತ್ತು ಡೀಸಲ್ ಉತ್ಪಾದನೆ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾದ ನಂತರ 1ತಿಂಗಳಿಗೆ ಸುಮಾರು 5ರಿಂದ 6ಲಕ್ಷಗಳಷ್ಟು ಬಾಡಿಗೆಯನ್ನು ನಗರಸಭೆಗೆ ಕಂಪನಿಯಿಂದ ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: