ಮೈಸೂರು

ರಥಸಪ್ತಮಿ ಅಂಗವಾಗಿ‌ 108 ಬಾರಿ ಸಾಮೂಹಿಕ ಸೂರ್ಯ ನಮಸ್ಕಾರ : 108 ಬಾರಿ ಸೂರ್ಯ ನಮಸ್ಕಾರ ಮಾಡಿದ ಮೇಯರ್

ಮೈಸೂರು, ಫೆ.4:- ರಥಸಪ್ತಮಿ ಅಂಗವಾಗಿ‌ ಯೋಗ ಫೆಡರೇಷನ್ ಆಫ್ ಮೈಸೂರು ಟ್ರಸ್ಟ್ ವತಿಯಿಂದ ಅರಮನೆ ಮುಂಭಾಗ ನಿನ್ನೆ ಹಮ್ಮಿಕೊಳ್ಳಲಾದ 108 ಬಾರಿ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು, ಸಾವಿರಾರು ಯೋಗಬಂಧುಗಳು ಭಾಗವಹಿಸಿ ಯೋಗಾಸನ ಮಾಡಿದರು.

ಶ್ರೀ ಯೋಗಾನರಸಿಂಹ ಸ್ವಾಮಿ ದೇವಸ್ಥಾನದ  ಶ್ರೀ ಭಾಷ್ಯಂ ಸ್ವಾಮೀಜಿ, ಶ್ರೀನಿವಾಸ್, ಯೋಗ ಫೆಡರೇಷನ್ ಆಫ್ ಮೈಸೂರು ಟ್ರಸ್ಟ್ ನ ಶ್ರೀಹರಿ, ಡಾ. ಗಣೇಶ್ ಕುಮಾರ್, ಡಾ. ಮಾರುತಿ, ಡಾ. ಬಿ.ಪಿ. ಮೂರ್ತಿ, ಶಶಿಕುಮಾರ್, ಯೋಗ ಶಿಕ್ಷಕ ಆರ್.  ರಂಗನಾಥ್, ಶಾಸಕರಾದ ಎಸ್.ಎ. ರಾಮದಾಸ್, ಕನ್ಯಕುಮಾರಿ ಯೋಗ ಕೇಂದ್ರದ ಸುಚರಿತ ಮಾತಾಜಿ,  ಮತ್ತಿತರರು ಭಾಗವಹಿಸಿದ್ದರು.

ಮೈಸೂರು ನಗರಪಾಲಿಕೆ ಮೇಯರ್ ಪುಷ್ಪಲತಾ ಜಗನ್ನಾಥ್ ಅವರು ಭಾಗವಹಿಸಿ, 108 ಬಾರಿ ಸೂರ್ಯ ನಮಸ್ಕಾರ ಮಾಡಿದ್ದು, ಕಾರ್ಯಕ್ರಮದ ವಿಶೇಷವಾಗಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: