ದೇಶ

ವಿತ್ ಡ್ರಾ ಮಾಡಲು ಇದ್ದ ಮಿತಿ ಹೆಚ್ಚುವ ಸಾಧ್ಯತೆ ?

ನೋಟ್ ಬ್ಯಾನ್ ನಂತರ ನಗದಿಗಾಗಿ ಪರದಾಡುತ್ತಿರುವ ಜನಸಾಮಾನ್ಯರಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ. ಯಾಕೆಂದರೆ ಬ್ಯಾಂಕ್‍ಗಳಲ್ಲಿ ಹಣ ವಿತ್‍ಡ್ರಾ ಮಾಡಲು ಇದ್ದ ಮಿತಿ ಹೆಚ್ಚಾಗುವ ಸಾಧ್ಯತೆ ಇದೆ.ಇದೇ ವಾರದೊಳಗೆ ವಿತ್‍ಡ್ರಾವಲ್ ಮಿತಿಯಲ್ಲಿ ಬದಲಾವಣೆ ತರಲು ಆರ್‍ಬಿಐ ಚಿಂತಿಸಿದೆ.

ಪ್ರಸ್ತುತ ಒಂದು ವಾರಕ್ಕೆ ಕರೆಂಟ್ ಅಕೌಂಟ್‍ನಿಂದ 50 ಸಾವಿರ ರೂ. ಹಾಗೂ ಸೇವಿಂಗ್ಸ್ ಅಕೌಂಟ್‍ನಿಂದ 24 ಸಾವಿರ ರೂ. ಡ್ರಾ ಮಾಡಬಹುದಾಗಿದೆ.ಮೂಲಗಳ ಪ್ರಕಾರ ಸೇವಿಂಗ್ಸ್ ಅಕೌಂಟ್‍ನಿಂದ ವಿತ್‍ಡ್ರಾ ಮಾಡಲು ಇರುವ ಮಿತಿ 24 ಸಾವಿರದಿಂದ 35 ಸಾವಿರ ರೂ.ಗೆ ಏರಿಕೆಯಾಗಲಿದೆ ಅಂತ ಹೇಳಲಾಗಿದೆ. ಆದರೆ ವಿತ್‍ಡ್ರಾವಲ್ ಮಿತಿಯನ್ನು ಯಾವಾಗ ಸಂಪೂರ್ಣವಾಗಿ ಹಿಂಪಡೆಯಲಾಗುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲ.ಇದಲ್ಲದೆ ಡಿಜಿಟಲ್ ವಹಿವಾಟನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕ್ಯಾಶ್ ವಿತ್‍ಡ್ರಾವಲ್ ಮೇಲೆ ತೆರಿಗೆ ಹೇರುವ ನಿರ್ಧಾರದ ಬಗ್ಗೆ ಕೇಂದ್ರ ಸರ್ಕಾರ ಚಿಂತಿಸುತ್ತಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕರೆ ಫೆಬ್ರವರಿ 1ರ ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗುತ್ತದೆ. ಕ್ಯಾಶ್ ತೆರಿಗೆಯ ಸಾಧಕ ಬಾಧಕಗಳ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಈ ಮೊದಲು ಯುಪಿಎ ಸರ್ಕಾರದಡಿ ಇದ್ದ ಬ್ಯಾಂಕಿಂಗ್ ಕ್ಯಾಶ್ ಟ್ರಾನ್ಸಾಕ್ಷನ್ ಟ್ಯಾಕ್ಸನ ತಿರುಚಿದ ರೂಪವೇ ಇದಾಗಿದೆ. ಇದರ ಅಡಿ ಬ್ಯಾಂಕ್ ಖಾತೆಗಳಿಂದ ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚಿನ ನಗದು ಹಣ ವಿತ್‍ಡ್ರಾ ಮಾಡಿದ್ರೆ ತೆರಿಗೆ ಹಾಕಲಾಗುತ್ತದೆ. ಈ ಬಗ್ಗೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ನಗದು ಹಣದ ವಹಿವಾಟನ್ನು ಕುಗ್ಗಿಸಿ ಡಿಜಿಟಲ್ ವಹಿವಾಟನ್ನು ಹೆಚ್ಚಿಸುವುದು ಈ ಹೊಸ ತೆರಿಗೆಯ ಉದ್ದೇಶ.ಕಪ್ಪುಹಣದ ಮೇಲಿನ ವಿಶೇಷ ತನಿಖಾ ದಳ ಈಗಾಗಲೇ 3 ಲಕ್ಷ ರೂಪಾಯಿಗೂ ಹೆಚ್ಚಿನ ನಗದು ವಹಿವಾಟನ್ನು ನಿಷೇಧಿಸಬೇಕು. ಹಾಗೂ ವ್ಯಕ್ತಿಯೊಬ್ಬ 15 ಲಕ್ಷ ರೂ.ಗಿಂತ ಹೆಚ್ಚಿನ ನಗದು ಹೊಂದಿರಬಾರದು ಎಂದು ಶಿಫಾರಸ್ಸು ಮಾಡಿದೆ. ಅಲ್ಲದೆ ಬ್ಯಾಂಕಿಂಗ್ ಕ್ಯಾಶ್ ಟ್ರಾನ್ಸಾಕ್ಷನ್ ಟ್ಯಾಕ್ಸ್(ಬಿಸಿಟಿಟಿ)ಯನ್ನು ಮತ್ತೆ ಪರಿಚಯಿಸಬೇಕು ಎಂದು ಪಾರ್ಥಸಾರಥಿ ಶೋಮಿ ನೇತೃತ್ವದ ದಿ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ ರಿಫಾರ್ಮ್ ಕಮಿಷನ್(ಟಿಎಆರ್‍ಸಿ) ಶಿಫಾರಸ್ಸು ಮಾಡಿದೆ. ಸೆಂಟ್ರಲ್ ಬ್ಯಾಂಕ್ ಮಾಹಿತಿಯ ಪ್ರಕಾರ ಕಳೆದ ನವೆಂಬರ್‍ಗೆ ಹೋಲಿಸಿದರೆ ಡಿಸೆಂಬರ್‍ನಲ್ಲಿ ಡಿಜಿಟಲ್ ವಹಿವಾಟು ಶೇ. 43ರಷ್ಟು ಹೆಚ್ಚಿದೆ ಎಂದು ತಿಳಿದುಬಂದಿದೆ.

Leave a Reply

comments

Related Articles

error: