ದೇಶಪ್ರಮುಖ ಸುದ್ದಿ

ಅಸ್ಸಾಂ ರೈಲು ನಿಲ್ದಾಣ, ರೈಲಿನಲ್ಲಿ ಭಾರೀ ಪ್ರಮಾಣದ ಸ್ಫೋಟಕಗಳ ಪತ್ತೆ!

ಗುವಾಹಟಿ (ಫೆ.4): ಅಸ್ಸಾಂ ನ ಮೋರಿಗಾಂವ್‌ ಜಿಲ್ಲೆಯಲ್ಲಿ ಅವಧ್‌-ಅಸ್ಸಾಂ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮತ್ತು ಗುವಾಹಟಿ ರೈಲು ನಿಲ್ದಾಣದಲ್ಲಿ ಭಾರೀ ಪ್ರಮಾಣದ ಜಿಲೆಟಿನ್‌ ಕಡ್ಡಿಗಳು, ಡಿಟೋನೇಟರ್‌ಗಳು ಮತ್ತು ಫ್ಯೂಸ್‌ ವಯರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಆರ್‌ಪಿ ಹೇಳಿದೆ.

ಗುವಾಹಟಿ ರೈಲು ನಿಲ್ದಾಣದ ಪ್ಲಾಟ್‌ಫಾರಂ ನಲ್ಲಿ ಬೆಳಗ್ಗೆ ಸುಮಾರು 5.40ರ ಸುಮಾರಿಗೆ ಅನಾಥವಾಗಿ ಬಿದ್ದಿದ್ದ ಚೀಲವೊಂದರಲ್ಲಿ 440 ಜಿಲೆಟಿನ್‌ ಕಡ್ಡಿಗಳು, 700 ಡಿಟೋನೇಟರ್‌ಗಳು ಮತ್ತು ಫ್ಯೂಸ್‌ ವಯರ್‌ನ ಮೂರು ಬಂಡಲ್‌ಗ‌ಳು ಪತ್ತೆಯಾದವು. ಇದೇ ವೇಳೆ ಜಾಗೀರೊಡ್‌ ರೈಲ್ವೆ ಸ್ಟೇಶನ್‌ನಲ್ಲಿ ಅವಧ್‌-ಅಸ್ಸಾಂ ಎಕ್ಸ್‌ಪ್ರೆಸ್‌ ರೈಲಿನ ಬೋಗಿಯೊಂದರಲ್ಲಿ 160 ಜಿಲೆಟಿನ್‌ ಕಡ್ಡಿಗಳು ಮತ್ತು 500 ಡಿಟೋನೇಟರ್‌ಗಳು ಪತ್ತೆಯಾದವು ಎಂದು ಸರಕಾರಿ ರೈಲ್ವೇ ಪೊಲೀಸ್‌ (ಜಿಆರ್‌ಪಿ) ತಿಳಿಸಿದೆ.

ಜಾಗೀರೊಡ್‌ ರೈಲು ನಿಲ್ದಾಣ ಗುವಾಹಟಿಯಿಂದ 60 ಕಿ.ಮೀ. ದೂರದಲ್ಲಿದೆ. ಪ್ರಕರಣದ ಬಗ್ಗೆ ಕೇಸು ದಾಖಲಿಸಿಕೊಂಡು ನಡೆಸಲಾಗುತ್ತಿದೆ. (ಎನ್.ಬಿ)

Leave a Reply

comments

Related Articles

error: