ಮೈಸೂರು

ಸಂಸ್ಕೃತ ಭಾಷೆಯನ್ನು ಪಸರಿಸಲು ಕಾಲ ಸನ್ನಿಹಿತವಾಗಿದೆ : ಪ್ರೊ.ಟಿ.ಎನ್.ಪ್ರಭಾಕರ್ ಇಂಗಿತ

ಪಾಶ್ಚಾತ್ಯ ಸಂಸ್ಕೃತಿ ಮತ್ತು ನಾಗರಿಕತೆಯನ್ನು ಹೊರತುಪಡಿಸಿ ಭಾರತೀಯ ಸನಾತನ ಸಂಸ್ಕೃತಿಯಲ್ಲಿರುವ ವೇದ, ಉಪನಿಷತ್, ಪುರಾಣ ಗ್ರಂಥಗಳ ಜ್ಞಾನವೂ ಅಪಾರ, ಭಾರತ ಎಂದರೇ ಸಂಸ್ಕೃತ ಎನ್ನುವ ಕಾಲವೊಂದಿತ್ತು, ವಿದೇಶಿ ಶಿಕ್ಷಣ ಪದ್ಧತಿ ಜಾರಿಯಾಗಿ ನಮ್ಮಲ್ಲಿರುವ ಜ್ಞಾನ ಸಂಪತ್ತನ್ನು ಕಡೆಗಣಿಸಲಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಪ್ರೊ.ಟಿ.ಎನ್.ಪ್ರಭಾಕರ್ ವಿಷಾದಿಸಿದರು.

ಅವರು, ಜೆ.ಎಸ್.ಎಸ್. ಕಾಲೇಜಿನ ಸಂಸ್ಕೃತ ವಿಭಾಗದಿಂದ ಆಯೋಜಿಸಿದ್ದ ಸಂಸ್ಕೃತೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಗವೊಂದೆ ವಸುದೈವ ಕುಟುಂಬಕಂ ಭಾವನೆಯು ಭಾರತಿಯರಲ್ಲಿತ್ತು, ಪ್ರಸ್ತುತ ಪ್ರತಿಯೊಬ್ಬರಿಗೂ ಸಂಸ್ಕೃತ ಭಾಷೆಯನ್ನು ಪರಿಚಯಿಸುವ ಕಾಲಕೂಡಿದೆ ಎಂದ ಅವರು ಶಿಬಿರಗಳನ್ನು ಆಯೋಜಿಸಿ ಪಸರಿಸಬೇಕೆಂದು ಆಶಿಸಿದರು.

ಪ್ರಾಂಶುಪಾಲರಾದ ಪ್ರೊ.ಎಂ.ಮಹದೇವಪ್ಪ, ಎಸ್.ಸೋಮಶೇಖರ್, ಡಾ.ವೆಂಕಟರಮಣ ಹೆಗಡೆ, ಪ್ರೊ.ಎಂ.ವಿಶ್ವನಾಥ್, ಎಂ.ಎಸ್.ಕೋಮಲ, ಶಿವಲಿಂಗದೇವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Leave a Reply

comments

Related Articles

error: