ಮೈಸೂರು

ಜ.18 : ಎಪಿಎಂಸಿ ಮತ ಎಣಿಕೆ

ಸೋಮವಾರ ನಡೆದ ಎಪಿಎಂಸಿ  ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಜ.18 ರಂದು ಮೈಸೂರು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಅಂದು ಮಧ್ಯಾಹ್ನ ಫಲಿತಾಂಶ ಹೊರಬೀಳಲಿದೆ.

ಮೈಸೂರು ತಾಲೂಕಿನ ಮತ ಎಣಿಕೆ ಕಾರ್ಯವು ಮೈಸೂರು ನಗರದ ಗ್ರಾಮಾಂತರ ಬಸ್ ನಿಲ್ದಾಣದ ಎದುರಿನ ಪೀಪಲ್ಸ್ ಪಾರ್ಕ್ ನಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ನಂಜನಗೂಡು ಊಟಿ ರಸ್ತೆಯ ಸರ್ಕಾರಿ ಪಿಯು ಕಾಲೇಜು, ಹುಣಸೂರಿನ ವಿದ್ಯೋದಯ ಎಜುಕೇಷನಲ್ ಇನ್ಸಟಿಟ್ಯೂಟ್ ಕಟ್ಟಡ, ತಿ.ನರಸೀಪುರದ ಸರ್ಕಾರಿ ಪಿಯು ಕಾಲೇಜು, ಪಿರಿಯಾಪಟ್ಟಣದ ತಾಲೂಕು ಕಚೇರಿ, ಕೆ.ಆರ್.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಹೆಚ್.ಡಿ.ಕೋಟೆಯ ಸೇಂಟ್ ಮೇರಿಸ್ ಕಾನ್ವೆಂಟ್ ನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಮತ ಎಣಿಕೆ ಕೇಂದ್ರದ ಸುತ್ತ ಭದ್ರತೆ ಒದಗಿಸಲಾಗಿದೆ.

Leave a Reply

comments

Related Articles

error: