ಮೈಸೂರು

ಹಸುವನ್ನು ಕೊಂದು ಅದರ ಮುಂದೆ ಕುಳಿತ ಹುಲಿ : ಗ್ರಾಮಸ್ಥರಲ್ಲಿ ಆತಂಕ

ಹೆಚ್.ಡಿ.ಕೋಟೆ ತಾಲೂಕಿನ ಗುಂಡತ್ತೂರು ಗ್ರಾಮದಲ್ಲಿ ಹಸುವೊಂದನ್ನು ಕೊಂದ ಹುಲಿಯೊಂದು ಅದರ ಎದುರು ಕುಳಿತು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ ಘಟನೆ ನಡೆದಿದೆ.

ಗುಂಡತ್ತೂರು ಗ್ರಾಮದಲ್ಲಿ ಕಾಣಿಸಿಕೊಂಡ ಹುಲಿ ಅಲ್ಲಿನ ನಿವಾಸಿ ರಮೇಶ್ ಎಂಬವರ ತೋಟದೊಳಗೆ ನುಗ್ಗಿದ್ದು, ತೋಟದೊಳಗೆ ನುಸುಳಿದ ವೇಳೆ ಕೆಲಸಡ ಮಾಡುತ್ತಿದ್ದವರು ಗಾಬರಿಯಿಂದ ಓಡಿಹೋಗಿದ್ದಾರೆ. ಅವರ ಜಮೀನಿನಲ್ಲಿಯೇ ಹುಲಿ ತುಂಬಾ ಹೊತ್ತು ಓಡಾಡಿದೆ.

ಸ್ಥಳಕ್ಕೆ ಡಿ.ಬಿ.ಕುಪ್ಪೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಅರವಳಿಕೆ ಚುಚ್ಚುಮದ್ದು ನೀಡಿ ಹುಲಿ ಸೆರೆಗೆ ಸಿದ್ಧತೆ ನಡೆಸಿದ್ದಾರೆ. 50ಕ್ಕೂ ಹೆಚ್ಚು ಸಿಬ್ಬಂದಿಗಳು ಜಮೀನಿನ ಸುತ್ತ ಕಾವಲು ಕಾಯುತ್ತಿದ್ದು, ಹುಲಿಯ ಚಲನವಲನ ಗಮನಿಸುತ್ತಿದ್ದಾರೆಂದು ತಿಳಿದುಬಂದಿದೆ.

Leave a Reply

comments

Related Articles

error: