ಮೈಸೂರು

ವಾಹನ ಸವಾರರು ರಸ್ತೆ ನಿಯಮಗಳನ್ನು ದಯವಿಟ್ಟು ಪಾಲಿಸಿ : ಡಿಸಿಪಿ ಡಾ.ವಿಕ್ರಂ ಆಮಟೆ

‘ಓಪನ್ ಮ್ಯಾರಥಾನ್’ ಗೆ ಚಾಲನೆ

ಮೈಸೂರು,ಫೆ.5;- ಮೈಸೂರು ನಗರ ಸಂಚಾರ ಪೊಲೀಸರಿಂದ “30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ” ಅಂಗವಾಗಿ ಸುರಕ್ಷಿತ ಸಂಚಾರಕ್ಕಾಗಿ ಅರಿವು ಮೂಡಿಸುವ ಸಂಬಂಧ ‘ಓಪನ್ ಮ್ಯಾರಥಾನ್’ ಹಮ್ಮಿಕೊಳ್ಳಲಾಗಿತ್ತು.

ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದ ಬಳಿ ಇಂದು ಬೆಳಿಗ್ಗೆ ಡಿಸಿಪಿ ಡಾ.ವಿಕ್ರಂ ಆಮಟೆ ಹಸಿರು ನಿಶಾನೆ ತೋರುವ ಮೂಲಕ ಮ್ಯಾರಥಾನ್ ಗೆ ಚಾಲನೆ ನೀಡಿದರು.  ಬಳಿಕ ಮಾತನಾಡಿದ ಅವರು ಪ್ರಯಾಣಿಕರು ರಸ್ತೆ ಸುರಕ್ಷಾ ನಿಯಮಗಳನ್ನು ಅರಿತಿದ್ದರೂ ಅವುಗಳನ್ನು ಪಾಲಿಸದೇ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳಾಗುತ್ತಿವೆ. ವಾಹನ ಸವಾರರು ರಸ್ತೆ ನಿಯಮಗಳನ್ನು ದಯವಿಟ್ಟು ಪಾಲಿಸಿ.   ಈಗಾಗಲೇ ನಗರದಲ್ಲಿ ವಾಹನ ಸವಾರರಿಗೆ ಅರಿವನ್ನು ಮೂಡಿಸಲಾಗಿದೆ. ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ, ಕಾರಿನಲ್ಲಿ ಪ್ರಯಾಣಿಸುವವರು ಸೀಟ್ ಬೆಲ್ಟ್ ನ್ನು ಕಡ್ಡಾಯವಾಗಿ ಧರಿಸಿ. ಯುವಜನತೆ ಸಿಗ್ನಲ್ ಜಂಪ್ ಮಾಡಿ ಹೋಗುತ್ತಿರುವುದು ಕಂಡು ಬರುತ್ತಿದೆ. ಸಿಗ್ನಲ್ ನಿಯಮಗಳನ್ನು ಪಾಲಿಸಿ. ಇಲ್ಲದಿದ್ದಲ್ಲಿ ನಿಮ್ಮ ಜೀವಕ್ಕೆ ಅಪಾಯ ಎದುರಾಗಬಹುದು. ಮೊಬೈಲ್ ನಲ್ಲಿ ಮಾತನಾಡುತ್ತ ಚಾಲನೆ ಮಾಡುವುದನ್ನು ನಿಲ್ಲಿಸಿ ಎಂದು ಎಚ್ಚರಿಸಿದರು. ಇಂತಹ ಕಾನೂನುಗಳನ್ನು ಉಲ್ಲಂಘಿಸುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕೇವಲ ಕಾನೂನು ಮತ್ತು ಸುವ್ಯವಸ್ಥೆ ಇಲಾಖೆ ಮಾತ್ರ ಕಾನೂನು ಪಾಲಿಸಿದರೆ ಸಾಲದು, ಸಾರ್ವಜನಿಕರೂ ಅದಕ್ಕೆ ಸಹಕರಿಸಬೇಕು ಎಂದರು.

ಕೆ.ಆರ್.ವೃತ್ತ, ದೇವರಾಜ ಅರಸು ರಸ್ತೆ, ಜೆ.ಎಲ್.ಬಿ ರಸ್ತೆ, ಮೂಡಾ ಜಂಕ್ಷನ್, ರಾಮಸ್ಥಾಮಿ ವೃತ್ತ, ನೂರಡಿ ರಸ್ತೆ, ಸೀತಾವಿಲಾಸ ಜಂಕ್ಷನ್, ಪಾಠಶಾಲಾ ಜಂಕ್ಷನ್, ಗನ್‍ಹೌಸ್ ವೃತ್ತ, ಜಯಮಾರ್ತಾಂಡ ಗೇಟ್, ಹಾರ್ಡಿಂಜ್ ವೃತ್ತದಲ್ಲಿ ಎಡತಿರುವು ಪಡೆದು ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿ ಮುಕ್ತಾಯಗೊಂಡಿತು.

ಈ ‘ಓಪನ್ ಮ್ಯಾರಥಾನ್’  ಕಾರ್ಯಕ್ರಮದಲ್ಲಿ  ಪೊಲೀಸ್ ಸಿಬ್ಬಂದಿಗಳು, ನಾಗರೀಕರು, ವಿದ್ಯಾರ್ಥಿಗಳು, ಸಂಘ ಸಂಸ್ಥೆಯವರು  ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: