ಮೈಸೂರು

ಜೀವನದಲ್ಲಿ ಜಿಗುಪ್ಸೆ : ವ್ಯಕ್ತಿ ನೇಣಿಗೆ ಶರಣು

ಮೈಸೂರು,ಫೆ.5:- ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೋರ್ವರು ನೇಣಿಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಹೊಸೂರಹುಂಡಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಎಂ.ಸಿದ್ದಲಿಂಗಸ್ವಾಮಿ (35) ಎಂದು ಗುರುತಿಸಲಾಗಿದೆ. ಹನ್ನೊಂದು ವರ್ಷದ ಹಿಂದೆ ಮಾವಿನಹಳ್ಳಿ ಗ್ರಾಮದ ಸೌಮ್ಯ ಜೊತೆ ಇವರ ವಿವಾಹವಾಗಿತ್ತು. ವರ್ಷಗಳನಂತರ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾದ ಹಿನ್ನಲೆ ಜೀವನಾಂಶಕ್ಕಾಗಿ ಪತ್ನಿ ಸೌಮ್ಯ ಕೋರ್ಟ್ ಮೆಟ್ಟಿಲೇರಿದ್ದರು. ದಾಂಪತ್ಯ ಜೀವನದಲ್ಲಿ ಕಲಹ ಹಿನ್ನೆಲೆಯಲ್ಲಿ ಜಿಗುಪ್ಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುದಾಗಿ ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.

ಸಂಬಂಧ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: