ಮೈಸೂರು

ಜ.19-24: ಕಾನ್ಸಟೇಬಲ್ ಹುದ್ದೆಗೆ ದೈಹಿಕ ಸಾಮರ್ಥ್ಯ ಪರೀಕ್ಷೆ

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸಿಎಆರ್ ಮೈದಾನದಲ್ಲಿ ಜ.19ರಿಂದ 24 ರವರೆಗೆ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಪೊಲೀಸ್ ಕಾನ್ಸಟೇಬಲ್ ಹುದ್ದೆಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಯಲಿದೆ.

ಪ್ರತಿ ದಿನ ಬೆಳಿಗ್ಗೆ 6 ಗಂಟೆಯಿಂದ ಸಂಜೆಯವರೆಗೆ ನಡೆಯಲಿರುವ ಪರೀಕ್ಷೆಯಲ್ಲಿ ವೈದ್ಯಕೀಯ ತಪಾಸಣೆ, ಎದೆಯಳತೆ, ಎತ್ತರ, ತೂಕ, ರನ್ನಿಂಗ್, ಹೈಜಂಪ್, ಲಾಂಗ್ ಜಂಪ್, ಶಾಟ್ ಪುಟ್ ನಂತಹ ದೈಹಿಕ ಸಾಮರ್ಥ್ಯ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಅಭ್ಯರ್ಥಿಗಳ ತಪಾಸಣಾ ಪ್ರಕ್ರಿಯೆಯನ್ನು ವಿಡಿಯೋ ರೆಕಾರ್ಡಿಂಗ್ ಮಾಡಲಿದ್ದು, ಪಾರದರ್ಶಕ ನೀತಿಯಂತೆ ಆಯ್ಕೆ ಪ್ರಕ್ರಿಯೆ ನಡೆಸುವುದರಿಂದ ಯಾರೂ ಮಧ‍್ಯವರ್ತಿಗಳಿಗೆ ಲಂಚ ನೀಡಬಾರದು ಎಂದು ಪೊಲೀಸ್ ಕಮೀಷನರ್ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಸೂಚನೆ ನೀಡಿದ್ದಾರೆ.

Leave a Reply

comments

Related Articles

error: