
ಮೈಸೂರು
ನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಬಿಟ್ಟು ಹೋಗಲ್ಲ : ವದಂತಿಗಳಿಗೆ ತೆರೆ ಎಳೆದ ಶಾಸಕ ಅಶ್ವಿನ್ ಕುಮಾರ್
ಮೈಸೂರು,ಫೆ.5:- ಆಪರೇಷನ್ ಕಮಲ ವಿಚಾರಕ್ಕೆ ಸಂಬಂಧಿಸಿದಂತೆ ತಿ.ನರಸೀಪುರ ಶಾಸಕ ಅಶ್ವಿನ್ ಕುಮಾರ್ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಇಂದು ಕುಂಭಮೇಳ ಸ್ಥಳ ಪರಿಶೀಲನೆ ನಡೆಸಿ ನಂತರ ಮಾತನಾಡಿದ ಅವರು ನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಬಿಟ್ಟು ಹೋಗಲ್ಲ. ಜೆಡಿಎಸ್ನಿಂದ ಆಯ್ಕೆಯಾಗಿರುವ 37 ಶಾಸಕರೂ ಸೈನಿಕರಿದ್ದಂತೆ. ವೈಯುಕ್ತಿಕವಾಗಿ ನನಗೆ ರಾಜಕೀಯ ಜೀವನ ನೀಡಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ. ನಾನು ಅವರೊಂದಿಗೆ ಇದ್ದೇನೆ. ಫೈನಾನ್ಸ್ ಕಮಿಟಿ ಮೀಟಿಂಗ್ಗಾಗಿ ನಾನು ದೆಹಲಿಗೆ ಹೋಗಿದ್ದು ನಿಜ. ಆಗಲೂ ಮುಖ್ಯಮಂತ್ರಿಗಳ ಅನುಮತಿ ಪಡೆದೇ ಹೋಗಿದ್ದೆ. ಬಿಜೆಪಿಯ ಯಾವೊಬ್ಬ ನಾಯಕರೂ ನನ್ನನ್ನು ಸಂಪರ್ಕ ಮಾಡಿಲ್ಲ. ಪಕ್ಷಾಂತರ ಮಾಡುವ ಅಗತ್ಯವಿಲ್ಲ. ಎಂದು ತಿ.ನರಸೀಪುರ ಜೆಡಿಎಸ್ ಶಾಸಕ ಅಶ್ವಿನ್ ಕುಮಾರ್ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಈ ಸಂದರ್ಭ ಸಚಿವ ಜಿ.ಟಿ.ದೇವೇಗೌಡ ಮತ್ತಿತರರು ಶಾಸಕರ ಜೊತೆಗಿದ್ದರು. (ಕೆ.ಎಸ್,ಎಸ್.ಎಚ್)