ಪ್ರಮುಖ ಸುದ್ದಿಮೈಸೂರು

ಫೆ.23ರಂದು ಬೃಹತ್ ಉದ್ಯೋಗ ಮೇಳ

ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ನೇತೃತ್ವ

ಮೈಸೂರು, ಫೆ.5 :  ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವತಿಯಿಂದ ವರುಣಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಫೆ. 23 ರಂದು ಬೆಳಗ್ಗೆ 9ರಿಂದ ಸಂಜೆ 5 ರವರೆಗೆ ತಾಂಡವಪುರ ಗ್ರಾಮದ ಅಗ್ನಿ ನೇತ್ರಾಂಬಿಕ ದೇವಸ್ಥಾನದ ಆವರಣದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಅಕ್ಷರ ಫೌಂಡೇಷನ್ ಸಂಸ್ಥೆಯ ಉದ್ಯೋಗ ಮೇಳ ಆಯೋಜಕ ಕುಮಾರ್ ಉಪ್ಪಾರ್ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉದ್ಯೋಗ ಮೇಳದಲ್ಲಿ ಜ್ಯುಬಿಲ್ಯಾಂಟ್, ಟಿವಿಎಸ್ ಮೊದಲಾದ ನೂರಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳುತ್ತಿದ್ದು, ಸುಮಾರು ಐದು ಸಾವಿರ ಉದ್ಯೋಗಾವಕಾಶವಿದೆ. ಈ ಉದ್ಯೋಗ ಮೇಳದಲ್ಲಿ ಕನಿಷ್ಠ ಎರಡು ಸಾವಿರ ಜನಕ್ಕಾದರೂ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ.

ಹದಿನೆಂಟರಿಂದ ೩೫ ವರ್ಷ ವಯಸ್ಸಿನೊಳಗಿನ ಎಂಟನೇ ತರಗತಿಯಿಂದ ಪದವಿ, ಸ್ನಾತಕೋತ್ತರ ಪದವಿ ಮೊದಲಾದ ವಿದ್ಯಾಭ್ಯಾಸ ಹೊಂದಿರುವವರು ಪಾಲ್ಗೊಳ್ಳಬಹುದಾಗಿದ್ದು, ಬರುವಾಗ ತಮ್ಮ ಅಂಕಪಟ್ಟಿ, ಸ್ವಪರಿಚಯ ಮೊದಲಾದ ದಾಖಲೆಗಳ ಕನಿಷ್ಠ ಹತ್ತು ಸೆಟ್ ಹಾಗೂ ಪಾಸ್‌ಪೋರ್ಟ್ ಸೈಜ್ ಫೋಟೋಗಳನ್ನು ತರುವುದನ್ನು ಮರೆಯಬಾರದು. ಇನ್ನು ಎಲ್ಲರಿಗೂ ಉಚಿತ ಅವಕಾಶವಿದ್ದು, ಯಾವುದೇ ಶುಲ್ಕ ನೀಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಜೊತೆಗೆ, ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗೆ ದೂ. 9880128956 ಅಥವಾ 9740623263 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಸಿ. ಬಸವರಾಜು, ಮುನಿಯಪ್ಪ, ತಿಮ್ಮರಾಜು, ಎನ್. ಸಿದ್ದರಾಜ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: