ಕರ್ನಾಟಕ

ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಭೂಕಂಪ: ಮನೆಯಿಂದ ರಸ್ತೆಗೆ ಓಡಿಬಂದ ಜನ!

ಹೊಸನಗರ (ಫೆ.5): ಭಾನುವಾರ ಭೂಕಂಪನಕ್ಕೆ ಒಳಗಾಗಿದ್ದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ವರಾಹಿ ಜಲ ವಿದ್ಯುತ್‌ ಯೋಜನಾ ಪ್ರದೇಶದ ಅಸುಪಾಸಿನಲ್ಲಿ ಸೋಮವಾರವೂ ಲಘುಭೂಕಂಪನವಾಗಿದೆ. ಮಾಸ್ತಿಕಟ್ಟೆ, ಯಡೂರು, ಸುಳಗೋಡು ಹಾಗೂ ಮೇಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ 12.20ಕ್ಕೆ ಮತ್ತೆ ಲಘು ಭೂಕಂಪನ ಆಗಿರುವ ಅನುಭವವಾಗಿದ್ದು ಭೂಮಿ ನಡುಗಿದ ಶಬ್ದಕ್ಕೆ ಜನರು ಭಯಭೀತರಾಗಿ ಮನೆಯಿಂದ ರಸ್ತೆಗೆ ಬಂದಿದ್ದಾರೆ.

ಶಾಲೆಯಲ್ಲಿ ಮಕ್ಕಳು ಸಹ ಲಘು ಭೂಕಂಪನಕ್ಕೆ ಹೆದರಿ ಕೆಲ ಕಾಲ ಶಾಲೆ ಬಿಟ್ಟು ಶಿಕ್ಷಕರ ಜತೆಗೆ ಹೊರಗೋಡಿ ಬಂದಿದ್ದಾರೆ. ಒಮ್ಮೆ ಭೂಕಂಪನದ ನಂತರ ಈ ರೀತಿಯ ಸರಣಿ ಕಂಪನಗಳು ನಡೆಯುವುದು ಸಹಜ ಪ್ರಕ್ರಿಯೆಯಾಗಿದ್ದು ಇದನ್ನು ಪಶ್ಚಾತ್‌ ಕಂಪನ ಎಂದು ಕರೆಯುತ್ತಾರೆ. ಇದರಿಂದ ಯಾರು ಭಯಪಡಬೇಕಾದ ಅಗತ್ಯವಿಲ್ಲ ಎಂದು ಭೂವಿಜ್ಞಾನಿಗಳು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: