ಮನರಂಜನೆ

ಅಮೆಜಾನ್ ಪ್ರೈಮ್ ನಲ್ಲಿ `ಕೆಜಿಎಫ್’.!

ಬೆಂಗಳೂರು,ಫೆ.5-ರಾಕಿಂಗ್ ಸ್ಟಾರ್ ಯಶ್ ಅಭಿನಯದ `ಕೆಜಿಎಫ್’ ಸಿನಿಮಾ ಅಮೆಜಾನ್ ಪ್ರೈಮ್ನಲ್ಲಿ ರಿಲೀಸ್ ಆಗಿದೆ. ಇಂದಿನಿಂದ ಅಮೆಜಾನ್ ಪ್ರೈಮ್ ನಲ್ಲಿ ಕೆಜಿಎಫ್ ಸಿನಿಮಾ ನೋಡಬಹುದಾಗಿದೆ.

ಕೆಜಿಎಫ್ ಚಾಪ್ಟರ್ 1 ಸಿನಿಮಾದ ಸ್ಟ್ರೀಮಿಂಗ್ ಆರಂಭವಾಗಲಿದೆ ಎಂದು ಸ್ಟ್ರೀಮಿಂಗ್ ದೈತ ಅಮೆಜಾನ್ ಪ್ರೈಮ್ ವೀಡಿಯೋ ಪ್ರಕಟಿಸಿದೆ. ಕೇವಲ ಕನ್ನಡ ಅಷ್ಟೇ ಅಲ್ಲದೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಆವೃತ್ತಿಗಳೂ ಸ್ಟ್ರೀಮಿಂಗ್ ಆಗಲಿವೆ ಎಂದಿದೆ ಅಮೆಜಾನ್.

ಬಗ್ಗೆ ಟ್ವೀಟ್ ಮಾಡಿರುವ ಅಮೆಜಾನ್ “5000 RTs and we release KGF ” ಎಂದಿದ್ದು ಚಿತ್ರ ರಸಿಕರಲ್ಲಿ ಇನ್ನಷ್ಟು ಕುತೂಹಲ ಮೂಡಿಸಿದೆ. ಇದಕ್ಕೆ ಅದ್ಭುತ ಪ್ರತಿಕ್ರಿಯ ವ್ಯಕ್ತವಾಗಿದ್ದು ಇದುವರೆಗೆ 11 ಸಾವಿರ ರೀಟ್ವೀಟ್ ಆಗಿದ್ದು ಕೆಜಿಎಫ್ ಸಿನಿಮಾ ಬಗೆಗಿನ ಅಭಿಮಾನ ಟ್ವಿಟರ್ನಲ್ಲೂ ಸಾಬೀತಾಗಿದೆ.

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬಂದಿರುವ ಕೆಜಿಎಫ್: ಚಾಪ್ಟರ್ 1 ಸಿನಿಮಾ ಡಿಸೆಂಬರ್ 21, 2018ರಂದು ತೆರೆಕಂಡಿದ್ದು ಗೊತ್ತೇ ಇದೆ. ಸುಮಾರು 2400 ಚಿತ್ರಮಂದಿರಗಳಲ್ಲಿ ತೆರೆಕಾಣುವ ಮೂಲಕ ಸ್ಯಾಂಡಲ್ವುಡ್ನಲ್ಲಿ ದಾಖಲೆ ಸೃಷ್ಟಿಸಿತು. ವಿಶ್ವದಾದ್ಯಂತ ಕೆಜಿಎಫ್ ಚಿತ್ರದ ಕಲೆಕ್ಷನ್ 200 ಕೋಟಿ ದಾಟಿದೆ ಎನ್ನುತ್ತವೆ ಮೂಲಗಳು. (ಎಂ.ಎನ್)

Leave a Reply

comments

Related Articles

error: