ಮೈಸೂರು

ಮೃಗಾಲಯ ತೆರೆಯಿರಿ : ಹೋಟೆಲ್ ಮಾಲಿಕರಿಂದ ಪ್ರತಿಭಟನೆ

ಹಕ್ಕಿ ಜ್ವರದ ನೆಪವನ್ನಿಟ್ಟುಕೊಂಡು ಮೈಸೂರು ಮೃಗಾಲಯಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಗೊಳಿಸಿರುವುದನ್ನು ಖಂಡಿಸಿ ಮಂಗಳವಾರ ಬೆಳಿಗ್ಗೆ ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮೃಗಾಲಯ ಪ್ರಾಧಿಕಾರದ ಧೋರಣೆಯನ್ನು ಖಂಡಿಸಿದರು. ಹೋಟೆಲ್  ಮಾಲಿಕರ ಸಂಘದ ಅಧ್ಯಕ್ಷ ಸಿ.ನಾರಾಯಣ್ ಗೌಡ ಮಾತನಾಡಿ ಮೃಗಾಲಯದ ಅಧಿಕಾರಿಗಳ ಮೃಗಾಲಯ ಬಂದ್ ಮಾಡುವ ನಿರ್ಧಾರದಿಂದಾಗಿ ಹೋಟೆಲ್ ಉದ್ಯಮ ಸೇರಿದಂತೆ ಪ್ರವಾಸೋದ್ಯಮಕ್ಕೂ ಬಹಳ ನಷ್ಟವುಂಟಾಗುತ್ತಿದೆ. ಮೃಗಾಲಯದ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದರಿಂದ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗುತ್ತಿದ್ದು, ಸರ್ಕಾರ ಕೂಡಲೇ ಈ ನಿರ್ಬಂಧವನ್ನು ಆದಷ್ಟು ಬೇಗ ತೆರವುಗೊಳಿಸಿ ಈ ಉದ್ಯಮವನ್ನೇ ನಂಬಿ ಕುಳಿತಿರುವ ತಮ್ಮನ್ನು ರಕ್ಷಿಸಬೇಕಿದೆ ಎಂದು ತಿಳಿಸಿದರು. ಪ್ರತಿಭಟನಾಕಾರರ ಕೈಯ್ಯಲ್ಲಿ ಮೃಗಾಲಯ ಮುಚ್ಚಿದ ನಿದರ್ಶನವಿಲ್ಲ, ಪ್ರವಾಸೋದ್ಯಮ ರಹಿತ ಹೋಟೆಲ್ ಉದ್ಯಮವಿಲ್ಲ. ಮೃಗಾಲಯ ತೆರೆಯಿರಿ, ಮಾನವೀಯತೆ ಮೆರೆಯಿರಿ, ಉಳಿಸಿ ಉಳಿಸಿ ಮೃಗಾಲಯ, ಬೆಳೆಸಿ ಬೆಳೆಸಿ ಪ್ರವಾಸೋದ್ಯಮ, ಪ್ರವಾಸಿಗರೇ ಮೈಸೂರಿಗೆ ಮುಖ್ಯ. ಪ್ರವಾಸಿಗರಿಂದಲೇ ಮೈಸೂರು, ಪ್ರವಾಸೋದ್ಯಮದಿಂದ ಮೈಸೂರು ಜನರ ಜೀವನ ನಡೆಯುತ್ತಿದೆ. ಪ್ರವಾಸೋದ್ಯಮ ಇಲ್ಲದಿದ್ದರೆ ಮೈಸೂರಿಗರು ಬೀದಿಪಾಲು ಎಂಬಿತ್ಯಾದಿ ಬರಹಗಳನ್ನು ಹೊತ್ತ ನಾಮಫಲಕಗಳು ಕಂಡು ಬಂದವು.
ಪ್ರತಿಭಟನೆಯಲ್ಲಿ 50 ಕ್ಕೂ ಹೆಚ್ಚು ಹೋಟೆಲ್ ಮಾಲೀಕರು ಪಾಲ್ಗೊಂಡಿದ್ದರು.

Leave a Reply

comments

Related Articles

error: