ಪ್ರಮುಖ ಸುದ್ದಿ

ಕೇಂದ್ರ ಸರಕಾರವು ತಕ್ಷಣ ಕಾನೂನನ್ನು ಮಾಡಿ ಶ್ರೀರಾಮಮಂದಿರವನ್ನು ನಿರ್ಮಿಸಬೇಕು

ರಾಜ್ಯ(ಮಡಿಕೇರಿ)ಫೆ.5:- ತೀರ್ಥಕ್ಷೇತ್ರಗಳ ಪರಿಸರದಲ್ಲಿ ಮದ್ಯ ಮಾಂಸಗಳ ಮಾರಾಟದ ಮೇಲೆ ನಿರ್ಬಂಧವನ್ನು ಹೇರಬೇಕು ಮತ್ತು ಮಂದಿರಗಳನ್ನು ಸರ್ಕಾರೀಕರಣದಿಂದ ಮುಕ್ತಗೊಳಿಸಬೇಕು ಹಾಗೂ ಕೇಂದ್ರ ಸರಕಾರವು ತಕ್ಷಣ ಕಾನೂನನ್ನು ಮಾಡಿ ಶ್ರೀರಾಮಮಂದಿರವನ್ನು ನಿರ್ಮಿಸಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಹಿಂದೂ ಆಂದೋಲನ ಸಮಿತಿಯ ಪದಾಧಿಕಾರಿಗಳು ತಹಶೀಲ್ದಾರ್ ರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಸ್ವಾತಂತ್ರ್ಯಾನಂತರ 70 ವರ್ಷಗಳಿಂದ ಭಾರತವು ಧರ್ಮ ನಿರಪೇಕ್ಷ ದೇಶವಾಗಿದೆ ಎಂದು ಹೇಳುತ್ತ ಮದರಸಾಗಳಲ್ಲಿ ಖುರಾನ್ ಕಲಿಸಲಾಗುತ್ತಿದೆ. ಕ್ರೈಸ್ತ ಮಿಷನರಿಗಳ ಕಾನ್ವೆಂಟ ವಿದ್ಯಾಲಯಗಳಲ್ಲಿ ಬೈಬಲ್ ಕಲಿಸಲಾಗುತ್ತಿದೆ. ಹಿಂದೂ ವಿದ್ಯಾರ್ಥಿಗಳು ಯಾವ ವಿದ್ಯಾಲಯಗಳಲ್ಲಿ ಓದುವರೋ ಅಲ್ಲಿ ಧರ್ಮಗ್ರಂಥಗಳ ಶಿಕ್ಷಣವನ್ನು ನೀಡಬೇಕೆಂದು ಕೇಂದ್ರ ಸರಕಾರಕ್ಕೆ ಮನವಿ ನೀಡಲಾಯಿತು.

ಈ ಸಂದರ್ಭ ರಾಷ್ಟ್ರೀಯ ಹಿಂದು ಆಂದೋಲನ ಘಟಕದ ಪಧಾದಿಕಾರಿಗಳಾದ ಸೋಮೇಶ್, ಲಕ್ಷೀಶ್, ನೆಹರು, ಸುಬ್ಬಯ್ಯ, ಈರಪ್ಪ, ರಮೇಶ್, ಪೊನ್ನಪ್ಪ. ಬಸಪ್ಪ ಇದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: