ಕರ್ನಾಟಕ

`ಕಳ್ಬೆಟ್ಟದ ದರೋಡೆಕೋರರು’ ಸಿನಿಮಾದ ಎರಡನೇ ಹಾಡು ರಿಲೀಸ್

ಬೆಂಗಳೂರು,ಫೆ.6-ಕಳ್ಬೆಟ್ಟದ ದರೋಡೆಕೋರರುಸಿನಿಮಾದ ಎರಡನೇ ಹಾಡು ರಿಲೀಸ್ ಆಗಿದೆ. `ಹೋಯ್ ಕಮಲಿ ಬಸ್ಸಿನಗೆ ಹೋಗುವ.. ಹೋಯ್ ಕಮಲಿ ಅಕ್ಕ ಪಕ್ಕ ಕೂರುಮ..’ ಹಾಡು ಕೇಳಿದ ತಕ್ಷಣ ಇಷ್ಟವಾಗಲಿದೆ.

ವಿ.ನಾಗೇಂದ್ರ ಪ್ರಸಾದ್ ಹಾಡನ್ನು ಬರೆದಿದ್ದು, ಹೊಸ ರೀತಿಯಲ್ಲಿ ಹಾಡನ್ನು ಬರೆದಿದ್ದಾರೆ. ಅನೂಪ್ ಸಿಳೀನ್ ಸಂಗೀತ ನೀಡಿದ್ದಾರೆ. ನಾರಾಯಣ್ ಶರ್ಮಾ ಹಾಗೂ ವರಿಜಶ್ರೀ ವೇಣುಗೋಪಾಲ್ ಹಾಡನ್ನು ಚೆನ್ನಾಗಿ ಹಾಡಿದ್ದಾರೆ. ನಟ ನಟರಾಜ್ ಹಾಗೂ ಶ್ವೇತ ಪ್ರಸಾದ್ ಇಬ್ಬರ ಜೋಡಿ ತುಂಬ ಕ್ಯೂಟ್ ಆಗಿದೆ. ಇಬ್ಬರ ಎಕ್ಸ್ ಪ್ರೆಷನ್ ಗಳು ಹಾಡಿನ ಹೈಲೆಟ್ ಆಗಿದೆ.

ತಮ್ಮ ಹಾಡುಗಳು ಮೂಲಕ ಒಂದೊಳ್ಳೆ ಸಿನಿಮಾ ಮಾಡಿರುವ ಸೂಚನೆಯನ್ನು ನಿರ್ದೇಶಕ ದೀಪಕ್ ಮದುವನಹಳ್ಳಿ ನೀಡಿದ್ದಾರೆ. ಬ್ರಿಡ್ಜ್ ಫಿಲ್ಮ್ಸ್ ಹಾಗೂ ಜಿ ಪಿ ಮ್ಯೂಸಿಕ್ ಸಹಭಾಗಿತ್ವದಲ್ಲಿ ಚಿತ್ರ ನಿರ್ಮಾಣವಾಗಿದೆ. ಇದೇ ತಿಂಗಳು ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ. (ಎಂ.ಎನ್)

Leave a Reply

comments

Related Articles

error: