ಮನರಂಜನೆ

ಮತ್ತೆ ಮರಳಿದ್ದಾರೆ ಗಾಯಕಿ ನೇಹಾ ಕಕ್ಕರ್

ದೇಶ(ನವದೆಹಲಿ)ಫೆ.6:- ನಟ ಹಿಮಾಂಶ್ ಕೊಯ್ಲಿ ಜೊತೆ ಬ್ರೇಕ್ ಅಪ್ ಆದ ಬಳಿಕ ಖ್ಯಾತ ಗಾಯಕಿ ನೇಹಾ ಕಕ್ಕರ್ ಸಾಕಷ್ಟು ಸುದ್ದಿಯಲ್ಲಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟೊಂದನ್ನು ಹಾಕಿ ತಾನು ಖಿನ್ನತೆಗೊಳಗಾಗಿದ್ದೇನೆ ಎಂದು ಬರೆದುಕೊಂಡಿದ್ದರು. ಇದೀಗ ಮತ್ತೆ ತಾನು ಮರಳಿದ್ದೇನೆ ಎಂದು ಬರೆದುಕೊಂಡಿದ್ದಾರೆ.

“ಧನ್ಯವಾದಗಳು! ನಾನು ನಿಮ್ಮನ್ನು ಪ್ರೀತಿಸುತ್ತೇನೆ. ನೀವೆಲ್ಲರೂ ಎಷ್ಟು ಯೋಚಿಸುತ್ತೀರೋ ಅದಕ್ಕೂ ಸ್ವಲ್ಪ ಜಾಸ್ತಿಯೇ ನಿಮ್ಮನ್ನು ಪ್ರೀತಿಸುತ್ತೇನೆ. ಇಂದು ನಾನು ಯಾವ ಸ್ಥಿತಿಗೆ ಮರಳಿದ್ದೇನೆಯೋ ಅದಕ್ಕೆ ನೀವೇ ಕಾರಣ ಅದಕ್ಕೆ ನಿಮಗೆ ಧನ್ಯವಾದಗಳು” ಎಂದು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅವರು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಸಾಮಾಜಿಕ ಕಥೆಯೊಂದನ್ನು ಶೇರ್ ಮಾಡಿದ್ದು, ಸಿಂಗಲ್ ಆಗಿರುವುದರ ಒಳ್ಳೆಯ ವಿಷಯವೇನೆಂದರೆ  ಸಮಯಕ್ಕೆ ಸರಿಯಾಗಿ ನಿದ್ರೆ ಮಾಡಬಹುದು ಎಂದು ಬರೆದುಕೊಂಡಿದ್ದಾರೆ. ಇದಕ್ಕೂ ಮೊದಲು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ವೇಳೆ  ಮಾಜಿ ಪ್ರಿಯಕರ ಹಿಮಾಂಶ್ ಕೊಯ್ಲಿ ಕುರಿತು ಕೇಳಿದಾಗ ಯಾರು ಹಿಮಾಂಶ್ ಕೊಯ್ಲಿ? ಅಂತಹ ವ್ಯಕ್ತಿ ನನಗೆ ಯಾರೂ ತಿಳಿದಿಲ್ಲ ಎಂದಿದ್ದರು. ನೇಹಾ ಇದೀಗ ತನ್ನ ಸಹೋದರ, ಗಾಯಕ ಟೋನಿ ಕಕ್ಕರ್ ಅವರ ಲೇಟೆಸ್ಟ್ ಹಾಡು ‘ಕುಛ್ ಕುಛ್ ಹೋತಾ ಹೇ’ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರೇಮಿಗಳ ದಿನಾಚರಣೆಗೂ ಕೆಲವೇ ದಿನ ಮೊದಲು ಈ ಹಾಡು ಬಿಡುಗಡೆಗೊಳ್ಳಲಿದೆ. (ಎಸ್.ಎಚ್)

 

Leave a Reply

comments

Related Articles

error: