ಸುದ್ದಿ ಸಂಕ್ಷಿಪ್ತ

ಕೊತ್ತೇಗಾಲ ಗ್ರಾ.ಪಂ ನಗರ ಪುನರ್ವಸತಿ ಕಾರ್ಯಕರ್ತರ ಹುದ್ದೆ : ಅರ್ಜಿ ಆಹ್ವಾನ      

ಮೈಸೂರು, ಫೆ.6 : ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಗರ  ಪುನರ್ವಸತಿ ಯೋಜನೆಯಡಿ ತಿ.ನರಸೀಪುರ ತಾಲ್ಲೂಕಿನ ಯಾಚೇನಹಳ್ಳಿ ಹಾಗೂ ಕೊತ್ತೇಗಾಲ ಗ್ರಾಮ ಪಂಚಾಯಿತಿಗಳಲ್ಲಿ  ಖಾಲಿಯಿರುವ ನಗರ ಪುನರ್ವಸತಿ ಕಾರ್ಯಕರ್ತರನ್ನು ಗೌರವಧನದ ಆಧಾರದ ಮೇಲೆ ನೇಮಕಾತಿಗಾಗಿ ಅರ್ಜಿಗಳನ್ನು ಕರೆಯಲಾಗಿದೆ.

ಎಸ್.ಎಸ್.ಎಲ್.ಸಿ ಉತ್ತೀರ್ಣರಾದವರು ಅಂಕಪಟ್ಟಿ ಕಡ್ಡಾಯದ ಜೊತೆ ವಯೋಮಿತಿ 18 ರಿಂದ 45 ವರ್ಷದ ಒಳಗಿರಬೇಕು, ಪುರುಷ ಹಾಗೂ ಮಹಿಳೆ ಅಂಗವಿಕಲರಿಗೆ ಮಾತ್ರ ಅವಕಾಶವಿರುತ್ತದೆ. ಸದರಿ ಹುದ್ದೆಯು ಗೌರವಧನ ಹುದ್ದೆಯಾಗಿದ್ದು ಸರ್ಕಾರಿ ಹುದ್ದೆಯಾಗಿರುವುದಿಲ್ಲ. ಆಸಕ್ತ ವಿಕಲಚೇತನರು ನಿಗದಿತ ಅರ್ಜಿ ನಮೂನೆಯನ್ನು ತಿ.ನರಸೀಪುರ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ವಿಕಲಚೇತನರ ಪುನರ್ವಸತಿ ಶಾಖೆಯಲ್ಲಿ ಫೆಬ್ರವರಿ 4 ರಿಂದ 13 ರವರೆಗೆ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ದಾಖಲಾತಿಗಳೊಂದಿಗೆ ಫೆಬ್ರವರಿ 14 ರ ಸಂಜೆ 5.00 ಗಂಟೆಯೊಳಗೆ ಸಲ್ಲಿಸಬಹುದು ಹೆಚ್ಚಿನ ಮಾಹಿತಿಗೆ ತಿ.ನರಸೀಪುರ ತಾಲ್ಲೂಕು ಪಂಚಾಯಿತಿಯ ಗ್ರಾಮೀಣ ಪುನರ್ವಸತಿ ಶಾಖೆಯ ಮೊಬೈಲ್ ಸಂಖ್ಯೆ 9741552339 ಸಂಪರ್ಕಿಸಿ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: