ಸುದ್ದಿ ಸಂಕ್ಷಿಪ್ತ

ಕಾಪಿರೈಟ್ ಪುಸ್ತಕ ಆಹ್ವಾನ

ಮೈಸೂರು,ಫೆ.6 : ಗ್ರಂಥಸ್ವಾಮ್ಯ ವಿಭಾಗ, ರಾಜ್ಯ ಕೇಂದ್ರ ಗ್ರಂಥಾಲಯ, ಕಬ್ಬನ್ ಉದ್ಯಾನವನ, ಬೆಂಗಳೂರು ಇಲ್ಲಿ 2018ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಪುಸ್ತಕವನ್ನು ಫೆ. ದಿನಾಂಕ 11 ರ ಒಳಗೆ ಕಾಪಿರೈಟ್ ಮಾಡಿಸಿಬೇಕು. ಕಾಪಿರೈಟ್ ಮಾಡಿಸಿರುವ ಪುಸ್ತಕಗಳನ್ನು ಆಯ್ಕೆಗಾಗಿ ಅರ್ಜಿಯೊಂದಿಗೆ ಪುಸ್ತಕದ ಒಂದು ಪ್ರತಿಯನ್ನು (ನೋಂದಣಿ ಪತ್ರದ ಪ್ರತಿಯೊಂದಿಗೆ) ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4ನೇ ಮಹಡಿ, ಡಾ: ಅಂಬೇಡ್ಕರ್ ವೀಧಿ, ಬೆಂಗಳೂರು-560 001 ಇಲ್ಲಿಗೆ ಫೆ. ದಿನಾಂಕ 12ರ ಸಂಜೆ  5.30ರವರೆಗೆ ಸಲ್ಲಿಸುವುದು.
ನಿಗದಿತ ಅರ್ಜಿ ನಮೂನೆ ಮತ್ತು ನಿಬಂಧನೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಇಲಾಖಾ ರಾಜ್ಯದ ಎಲ್ಲಾ ಜಿಲ್ಲಾ/ನಗರ ಕೇಂದ್ರ ಗ್ರಂಥಾಲಯಗಳ ಉಪನಿರ್ದೇಶಕರು, ಮುಖ್ಯ ಗ್ರಂಥಾಲಯಾಧಿಕಾರಿಗಳ ಕಛೇರಿಗಳಲ್ಲಿ ಪಡೆಯಬಹುದು ಹಾಗೂ ನಿರ್ದೇಶಕರ ಕಛೇರಿಯ ದೂರವಾಣಿ 080-22864990, 22867358 ನ್ನು ಸಂಪರ್ಕಿಸುವುದು.

Leave a Reply

comments

Related Articles

error: