ಸುದ್ದಿ ಸಂಕ್ಷಿಪ್ತ

ಬಂಗಾರದ ಪದಕ/ದತ್ತಿ ನಿಧಿಯನ್ನು ನೀಡಲು ಆಹ್ವಾನ

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ದ್ವಿತೀಯ ಘಟಕೋತ್ಸವವು ಮಾರ್ಚ್ 7 ರಂದು ನಡೆಯಲಿದೆ.

ಸದರಿ ಘಟಿಕೋತ್ಸವದಲ್ಲಿ ಕರ್ನಾಟಕ ಸಂಗೀತ ಗಾಯನ, ಹಿಂದೂಸ್ತಾನಿ ಸಂಗೀತ ಗಾಯನ, ತಬಲಾ, ಭರತನಾಟ್ಯ ಮತ್ತು ಮೃದಂಗ ವಿಷಯಗಳಲ್ಲಿ ಅಧ‍್ಯಯನ ಪೂರ್ಣಗೊಳಿಸಿ ತೇರ್ಗಡೆಯಾಗಿದ್ದು ಸ್ನಾತಕೋತ್ತರ ಮತ್ತು ಸ್ನಾತಕ ಪದವಿಗಳನ್ನು ಸ್ವೀಕರಿಸಲಿರುವ ಅಭ್ಯರ್ಥಿಗಳಿಗೆ ಬಂಗಾರದ ಪದಕ/ನಗದು ಬಹುಮಾನಗಳನ್ನು ನೀಡುವ ಸಲುವಾಗಿ ವಿಶವ್ವಿದ್ಯಾಲಯದ ನಿಯಮಾನುಸಾರ ದಾನಿಗಳಿಂದ ದತ್ತಿಗಳನ್ನು ಆಹ್ವಾನಿಸಲಾಗಿದೆ.

50 ಸಾವಿರ ರೂ. ಮೇಲ್ಪಟ್ಟು ದಾನಿಗಳು ದತ್ತಿಗಳನ್ನು ನೀಡಬಹುದಾಗಿದ್ದು, ಅವರು ಸೂಚಿಸಿರುವ ಹೆಸರಿನಲ್ಲಿ ಪದಕ/ನಗದು ಬಹುಮಾನಗಳನ್ನು ಪ್ರದಾನ ಮಾಡಲಾಗುವುದು. ಇದೇ ಮೊದಲ ಬಾರಿಗೆ ದತ್ತಿಗಳನ್ನು ನೀಡುವವರು ಹೆಚ್ಚುವರಿ 5 ಸಾವಿರ ರೂ.ಗಳನ್ನು ನೀಡಿದಲ್ಲಿ ಸದರಿ ಘಟಿಕೋತ್ಸವದಲ್ಲಿಯೇ ಸೂಚಿತ ಹೆಸರಿನಲ್ಲಿ ಪದಕ/ನಗದು ಬಹುಮಾನ ಪ್ರದಾನ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ 0821-2402141, 0821-2402114, ಇ-ಮೇಲ್: [email protected] ಗೆ ಸಂಪರ್ಕಿಸಬಹುದಾಗಿದೆ.

 

Leave a Reply

comments

Related Articles

error: