ಮೈಸೂರು

ಫೆಬ್ರವರಿ 9, 10 ರಂದು ದೇಸಿ ಅಕ್ಕಿ ಮೇಳ

ಮೈಸೂರು, ಫೆ.7:-  ಬೆಂಗಳೂರಿನ ಕೃಷಿ ಬೆಲೆ ಆಯೋಗ, ಮೈಸೂರಿನ ಕೃಷಿ ಇಲಾಖೆ, ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಸಹಜ ಸಮೃದ್ಧ ಭತ್ತ ಬೆಳೆಸಿ ಆಂದೋಲನ ಹಾಗೂ ಪ್ರಾಂತೀಯ ಸಹಕಾರ ಸಾವಯವ ಸಂಘಗಳ ಒಕ್ಕೂಟ ಇವರುಗಳ ಸಂಯುಕ್ತಾಶ್ರಯದಲ್ಲಿ ದೇಸಿ ಅಕ್ಕಿ ಮೇಳ-2019 ಮತ್ತು ರಾಜಮುಡಿ ಮತ್ತು ಇತರೆ ಸಾಂಪ್ರದಾಯಿಕ ದೇಸಿ ಭತ್ತದ ತಳಿಗಳ ಭೌಗೋಳಿಕ ಸನ್ನದು ಮೂಲಕ ಸಧೃಢ ಮಾರುಕಟ್ಟೆ ಮತ್ತು ಲಾಭದಾಯಕ ಧಾರಣೆ ಒದಗಿಸಲು ತಾಂತ್ರಿಕ ಕಾರ್ಯಗಾರವನ್ನು ಫೆಬ್ರವರಿ 9 ಮತ್ತು 10 ರಂದು ಬೆಳಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ಮೈಸೂರಿನ ಜಂಟಿ ನಿರ್ದೇಶಕರ ಕಛೇರಿ ಆವರಣದಲ್ಲಿ ಆಯೋಜಿಸಲಾಗಿದೆ.
ಫೆಬ್ರವರಿ 9 ಬೆಳಗ್ಗೆ 10 ಗಂಟೆಗೆ ಕೃಷಿ ಸಚಿವರಾದ ಎನ್.ಹೆಚ್ ಶಿವಶಂಕರರೆಡ್ಡಿ ಕಾರ್ಯಕ್ರಮ ಉದ್ಘಾಟಿಸುವರು. ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ ವಸ್ತು ಪ್ರದರ್ಶನ ಉದ್ಘಾಟಿಸುವರು. ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್ ದೇಸಿ ಅಕ್ಕಿ ಪುಸ್ತಕ ಬಿಡುಗಡೆ ಮಾಡುವರು. ಶಾಸಕರಾದ ಎಸ್.ಎ ರಾಮದಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಲೋಕಸಭಾ ಸದಸ್ಯರಾದ ಆರ್.ಧ್ರುವನಾರಾಯಣ್, ಎಲ್.ಆರ್.ಶಿವರಾಮೇಗೌಡ, ಪ್ರತಾಪ್ ಸಿಂಹ, ವಿಧಾನಸಭಾ ಸದಸ್ಯರಾದ ತನ್ವೀರ್ ಸೇಠ್, ಹೆಚ್.ವಿಶ್ವನಾಥ್, ಡಾ. ಯತೀಂದ್ರ ಸಿದ್ದರಾಮಯ್ಯ, ಕೆ.ಮಹದೇವು, ಎಲ್.ನಾಗೇಂದ್ರ, ಹರ್ಷವರ್ಧನ.ಬಿ, ಎಂ.ಅಶ್ವಿನ್ ಕುಮಾರ್, ಅನಿಲ್ ಕುಮಾರ್.ಸಿ ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಎಸ್.ನಾಗರಾಜು, ಆರ್.ಧರ್ಮಸೇನಾ, ಕೆ.ಟಿ ಶ್ರೀಕಂಠೇಗೌಡ, ಕೆ.ವಿ ನಾರಾಯಣಸ್ವಾಮಿ, ಮೈಸೂರು ಮಹಾನಗರ ಪಾಲಿಕೆ ಮಹಾ ಪೌರರಾದ ಪುಷ್ಪಲತಾ ಜಗನ್ನಾಥ್, ಮೈಸೂರು ಜಿಲ್ಲಾ ಪಂಚಾಯತ್ ಹಂಗಾಮಿ ಅಧ್ಯಕ್ಷರಾದ ಸಾ.ರಾ ನಂದೀಶ್ ಉಪ ಮಹಾ ಪೌರರಾದ ಶಫೀ ಅಹಮದ್, ತಾಲೂಕು ಪಂಚಾಯತ್ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಉಪಾಧ್ಯಕ್ಷ ಎನ್.ಬಿ ಮಂಜು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಕೆ.ಜ್ಯೋತಿ ಭಾಗವಹಿಸುವರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: