ಸುದ್ದಿ ಸಂಕ್ಷಿಪ್ತ

ವಿದ್ಯುತ್ ನಿಲುಗಡೆ

ಮೈಸೂರು, ಫೆ.7:-  ಎನ್.ಆರ್ ಮೊಹಲ್ಲಾ ವಿಭಾಗದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ  66/11 ಕೆ.ವಿ.ಸೌತ್ ವಿದ್ಯುತ್ ವಿತರಣಾ ಕೆಂದ್ರದಿಂದ ಹೊರಹೊಮ್ಮುವ 11 ಕೆ.ವಿ ಲಕ್ಷ್ಮೀಪುರಂ ಫೀಡರ್‍ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು  ಹಮ್ಮಿಕೊಳ್ಳಲಾಗಿದೆ.
ಫೆಬ್ರವರಿ 7 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಸೀತಾರಂಗ, ಲಕ್ಷ್ಮೀಪುರಂ, ಹೊಸಕೇರಿ, ಸುಣ್ಣದಕೇರಿ, ರೆಹಮಾನ್ಯ ಮೊಹಲ್ಲಾ, ಜೈನ್ ಭವನ್, ಕಾಕಲವಾಡಿ, ಡಿ. ಸುಬ್ಬಯ್ಯ ರಸ್ತೆ, ದಿವಾನ್ಸ್ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು  ಎನ್.ಆರ್ ಮೊಹಲ್ಲಾ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: