ಮೈಸೂರು

ಕಾಂಗ್ರೆಸ್ ಮುಖಂಡ,ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರ ಜನ್ಮದಿನದ ಪ್ರಯುಕ್ತ ಆರೋಗ್ಯ ತಪಾಸಣಾ ಕಾರ್ಯಕ್ರಮ

ಮೈಸೂರು,ಫೆ.7:- ಕಾಂಗ್ರೆಸ್ ಮುಖಂಡ,ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರ ಜನ್ಮದಿನದ ಪ್ರಯುಕ್ತ  ಇಂದು ನಗರದ ವಿವಿಧೆಡೆ ಅವರ ಅಭಿಮಾನಿಗಳು ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಪಾಲಿಕೆ ಸದಸ್ಯ ಗೋಪಿ ವತಿಯಿಂದ ಟಿ.ಕೆ ಬಡಾವಣೆ ವಾರ್ಡ್ ನಂಬರ್ 43ರಲ್ಲಿ ನಾಗಲಿಂಗೇಶ್ವರ ದೇವಸ್ಥಾನದಲ್ಲಿ ಆರೋಗ್ಯ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ನನ್ನ ಜನ್ಮದಿನದ ಪ್ರಯುಕ್ತ ಆರೋಗ್ಯ ತಪಾಸಣೆ ಹಮ್ಮಿಕೊಂಡು, ಅಭಿಮಾನಿಗಳು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ.ಅವರಿಗೆ ತಾಯಿ ಚಾಮುಂಡೇಶ್ವರಿ ಆಯುರಾರೋಗ್ಯವನ್ನು ನೀಡಲಿ ಎಂದರು. ಬಡವರಿಗೆ ಹೆಚ್ಚಿನ ಹಣ ನೀಡಿ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳುವುದು ಕಷ್ಟವಾಗಲಿದ್ದು, ಅಂತಹವರಿಗೆ ಆರೋಗ್ಯ ತಪಾಸಣೆ ಸಹಾಯವಾಗಲಿದೆ ಎಂದರು.ಈ ಸಂದರ್ಭ ಪಾಲಿಕೆಯ ಮೇಯರ್ ಪುಷ್ಪಲತಾ ಜಗನ್ನಾಥ್, ನಗರಪಾಲಿಕೆ ಮಾಜಿ ಸದಸ್ಯರಾದ ಚಿಕ್ಕಣ್ಣ, ಹರೀಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಬಿ.ಪಿ, ಶುಗರ್, ಹೃದಯ ಸಂಬಂಧಿ ತಪಾಸಣೆಯನ್ನು ನುರಿತ ವೈದ್ಯರಿಂದ ನಡೆಸಲಾಗಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: