ಪ್ರಮುಖ ಸುದ್ದಿಮೈಸೂರು

ಫೆ.9 ರಂದು ದಲಿತ ಸಾಹಿತ್ಯ ಅಕಾಡೆಮಿಯ ಸಮ್ಮೇಳನ : ರಾಷ್ಟ್ರೀಯ ವಿಚಾರ ಸಂಕಿರಣ

ಮೈಸೂರು,ಫೆ.7 : ನವದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ರಾಜ್ಯ ಘಟಕದ ವತಿಯಿಂದ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ತೃತೀಯ ರಾಜ್ಯ ಸಮ್ಮೇಳನವನ್ನು ಫೆ.9ರಂದು ಮಾನಸಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಸಮಿತಿ ರಾಜ್ಯಾಧ್ಯಕ್ಷ ಚಲುವರಾಜು ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಸಂವಿಧಾನ – ಸಾಮಾಜಿಕ ನ್ಯಾಯ ಸಾಮೂಹಿಕ ಜವಾಬ್ದಾರಿಗಳು ಕುರಿತು ನಡೆಯುವ ವಿಚಾರ ಸಂಕಿರಣವನ್ನು ರಾಷ್ಟ್ರೀಯ ಚಿಂತಕ ಡಾ.ಎಸ್.ಪಿ.ಸುಮಾನಕ್ಷರ್ ಉದ್ಘಾಟಿಸುವರು. ಬೆಂಗಳೂರು ಮಾನವ ಧರ್ಮಪೀಠ ನಿಡುಮಾಮಿಡಿ ಮಠದ ಶ್ರೀವೀರಭದ್ರ ಚನ್ನಮಲ್ಲಸ್ವಾಮೀಜಿ ಇರುವರು. ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವ ಹೆಚ್.ಎಂ.ರೇವಣ್ಣ ಇರಲಿದ್ದಾರೆ.

ಭಾರತೀಯ ಸಂವಿಧಾನ ಅಹಿಂದ ವರ್ಗಗಳ ಮೀಸಲಾತಿ ವಿಷಯವಾಗಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹೆಚ್.ಕಾಂತರಾಜು, ರಾಜೀಯ ಚಿಂತಕ ಪ್ರೊ.ಮುಜಾಫರ್ ಅಸಾದಿ ಉಪನ್ಯಾಸ ನೀಡುವರು, ಸಂಸದ ಆರ್ ಧ್ರುವನಾರಾಯಣ್ ಅಧ್ಯಕ್ಷತೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಸಚಿವ ಸಾ.ರಾ.ಮಹೇಶ್, ಶಾಸಕ ಎಲ್.ನಾಗೇಮದ್ರ, ದೆಹಲಿಯ ಬಿಡಿ.ಎಸ್.ಎ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಯ್ ಸುಮಾನಾಕ್ಷರ್ ಸೇರಿದಂತೆ ಹಲವು ಗಣ್ಯರು ಹಾಜರಿರಲಿದ್ದಾರೆ.

ನಂತರ 2.30 ರಿಂದ ಎಐಸಿಸಿ ಸದಸ್ಯೆ ಡಾ.ನಾಗಲಕ್ಷ್ಮಿ ವಿಷಯ ಮಂಡಿಸುವರು, ಕವಿಯತ್ನಿ ನಾಗರತ್ನ ಅವರುಗಳು  ಭಾರತೀಯ ಸಂವಿಧಾನ- ಮಹಿಳಾ ಸಬಲೀಕರಣ ವಿಷಯವಾಗಿ. ಮಧ್ಯಾಹ್ನ 3.30 ರಿಂದ ಭಾರತೀಯ ಸಂವಿಧಾನ –ಸಾಮಾಜಿಕ ಮತ್ತು ಆರ್ಥಿಕ ಪ್ರಜಾಸತ್ತೆ ವಿಷಯವಾಗಿ ವಿಮರ್ಶಕ ಪ್ರೊ.ಮಹೇಶ್ ಚಂದ್ರ ಗುರು ವಿಚಾರ ಮಂಡಿಸಲಿದ್ದು ರಾಜ್ಯ ಎಸ್.ಸಿ,ಎಸ್.ಟಿ. ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಾ.ಡಿ.ಶಿವಶಂಕರ್ ಪ್ರತಿಕ್ರಿಯೆ ನೀಡಲಿದ್ದಾರೆ. ಹಲವು ಗಣ್ಯರು ಉಪಸ್ಥಿತರಿರುವರು.

ಸಂಜೆ 4.30 ಕ್ಕೆ ಸಮಾರೋಪ, ಉರಿಲಿಂಗ ಪೆದ್ದಿಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ ಇರುವರು. ಇತಿಹಾಸ ತಜ್ಞ ಪ್ರೊ.ಸೆಬಾಸ್ಟಿನ್ ಜೋಸೆಫ್ ಅವರಿಂದ ಸಮಾರೋಪ ಭಾಷಣ, ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಪ್ರಾಧ್ಯಾಪಕ ಪ್ರೊ.ದಯಾನಂದ ಮಾನೆ, ಪ್ರಗತಿಪರ ರೈತ ರತ್ನಜ, ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಹಿರಿಯ ಪತ್ರಕರ್ತ ಕೆ.ದೀಪಕ್ ಹಾಜರಿರಲಿದ್ದಾರೆ ಎಂದು ತಿಳಿಸಿದರು.

ರಾಜ್ಯ ಮುಖ್ಯ ಸಂಘಟನಾ ಕಾರ್ಯದರ್ಶಿ ಡಾ.ಸಿ.ವೆಂಕಟೇಶ್, ರಾಜ್ಯ ಉಪಾಧ್ಯಕ್ಷ ಕೆ.ಎಸ್.ಶಿವರಾಮು ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: