ಮನರಂಜನೆ

ಫೆ.22 ರಂದು ‘ಸ್ಟ್ರೈಕರ್’ ಸಿನಿಮಾ ರಿಲೀಸ್

ಬೆಂಗಳೂರು,ಫೆ.7-ಚೂರಿಕಟ್ಟೆಖ್ಯಾತಿಯ ನಟ ಪ್ರವೀಣ್ ತೇಜ, ಭಜರಂಗಿ ಲೋಕಿ ಅಭಿನಯಿಸಿರುವ ಸ್ಟ್ರೈಕರ್’ ಸಿನಿಮಾ ಫೆ.22 ರಂದು ಬಿಡುಗಡೆಗೊಳ್ಳಲಿದೆ. ಸಿನಿಮಾ ಈಗಾಗಲೇ ಟ್ರೇಲರ್ ಮೂಲಕ ಸದ್ದು ಮಾಡುತ್ತಿದೆ.

ಇದೊಂದು ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಡಿಫ್ರೆಂಟ್ ಶೇಡ್ ಗಳಲ್ಲಿ ಪ್ರವೀಣ್ ನಟಿಸಿದ್ದಾರೆ. ಯಾವುದೇ ಘಟನೆ ನೋಡಿದರೂ ಇದು ಮೊದಲೇ ಎಲ್ಲೋ ನಡೆದಿತ್ತು ಎಂಬಂತೆ ನಾಯಕನಿಗೆ ಭಾಸವಾಗುತ್ತದೆ. ಯಾವುದು ನಿಜ, ಯಾವುದು ಭ್ರಮೆ ಎಂಬುದು ತಿಳಿಯದಂತಹ ಸ್ಥಿತಿ ಆತನದ್ದು. ಇಂತಹ ಪಾತ್ರದಲ್ಲಿ ಪ್ರವೀಣ್ ಬಣ್ಣ ಹಚ್ಚಿದ್ದು, ಇಡೀ ಸಿನಿಮಾ ಪಾತ್ರದ ಸುತ್ತ ನಡೆಯುತ್ತೆ.

ಇದೇ ಮೊದಲ ಬಾರಿಗೆ ಭಜರಂಗಿ ಲೋಕಿ ಪಾಸಿಟಿವ್ ಪಾತ್ರದಲ್ಲಿ ನಟಿಸಿರುವುದು ವಿಶೇಷ. ಪೊಲೀಸ್ ಆಫೀಸರ್ ಆಗಿ ಸೌರವ್ ಲೋಕಿ ಕಾಣಿಸಿಕೊಂಡಿದ್ದಾರೆ. ಮುಂಗಾರು ಮಳೆ 2′, ‘ನೀವು ಕರೆ ಮಾಡಿದ ಚಂದಾದಾರರುಚಿತ್ರದಲ್ಲಿ ನಟಿಸಿದ್ದ ಶಿಲ್ಪಾ ಮಂಜುನಾಥ್ ನಾಯಕಿಯಾಗಿ ನಟಿಸಿದ್ದಾರೆ.

ಇನ್ನುಳಿದಂತೆ ಗರುಡಾದ್ರಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ರಮೇಶ್ ಬಾಬು, ಶಂಕರಪ್ಪ, ಸುರೇಶ್ ಬಾಬು ಜತೆಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಪವನ್ ತ್ರಿವಿಕ್ರಮ್ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಒಂದೊಳ್ಳೆ ಕಥೆಚಿತ್ರಕಥೆಯ ಮೂಲಕ ಎಲ್ಲರ ಗಮನ ಸೆಳೆದಿರುವ ಸಿನಿಮಾ ಇದೇ ತಿಂಗಳು ಚಿತ್ರಮಂದಿರಕ್ಕೆ ಬರುತ್ತಿದೆ. (ಎಂ.ಎನ್)

 

Leave a Reply

comments

Related Articles

error: