ಮೈಸೂರು

ರುಡ್‍ಸೆಟ್‍ ಬೆಳ್ಳಿ ಹಬ್ಬ ಸಂಭ್ರಮ ‘ಜ.20ಕ್ಕೆ’

ಧರ್ಮಸ್ಥಳ ಗ್ರಾಮಾಭಿವೃದ್ಧಿ ಹಾಗೂ ಸ್ವ-ಉದ್ಯೋಗ ತರಬೇತಿ ಸಂಸ್ಥೆ ‘ರುಡ್‍ಸೆಟ್‍’ನ ಬೆಳ್ಳಿ ಹಬ್ಬ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೇಯ ನಿರ್ದೇಶಕ ಜಿ.ಸೆಲ್ವಂ ಸುದ್ದಿಗೋಷ‍್ಠಿಯಲ್ಲಿ ತಿಳಿಸಿದರು.

ಮಂಗಳವಾರ,ಪತ್ರಕರ್ತರ ಭವನದಲ್ಲಿ ಮಾತನಾಡಿ ಜ.20ರಂದು ಬೆಳಿಗ್ಗೆ 10.15ಕ್ಕೆ ಮೈಸೂರು ಜಗನ್ಮೋಹನ ಅರಮನೆ ಆವರಣದಲ್ಲಿ ನಡೆಯುವ ಸಮಾರಂಭವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು, ಮುಡಾ ಅಧ್ಯಕ್ಷ ಡಿ.ಧ್ರುವಕುಮಾರ್ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ಎಫ್.ಕೆ.ಸಿ.ಸಿ.ಐ ಉಪಾಧ್ಯಕ್ಷ ಸುಧಾಕರ್ ಎನ್.ಶೆಟ್ಟಿ, ಸಿಂಡಿಕೇಟ್ ಬ್ಯಾಂಕ್‍ ಮಹಾಪ್ರಬಂಧಕ ಎಂ.ಮೋಹನ್ ರೆಡ್ಡಿ, ಉಪಪ್ರಬಂಧಕ ಸಿ.ಶಾಂತಲಿಂಗಂ, ನೇಸರ್ ರಾಷ್ಟ್ರೀಯ ನಿರ್ದೇಶಕ ಕೆ.ಎನ್.ಜನಾರ್ದನ್, ಹಾಗೂ ಸಂಸ್ಥೆಯ ಆರ್.ಆರ್.ಸಿಂಗ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಂಸ್ಥೆಯು ಕಳೆದ 25 ವರ್ಷಗಳಿಂದ ಮೈಸೂರಿನಲ್ಲಿ ಸ್ವಯಂ ಉದ್ಯೋಗ ತರಬೇತಿಯನ್ನು ನೀಡಿ ಸಾವಿರಾರು ನಿರುದ್ಯೋಗಿಗಳಿಗೆ ಆಶಾದೀಪದಂತೆ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ವಿಭಾಗದ ವಿದ್ಯಾರ್ಥಿಗಳಿಗೆ ಆರ್ಥಿಕ ಸ್ವಾವಲಂಬನೆಯನ್ನೊದಗಿಸಲು ಮುಂಚೂಣಿಯಲ್ಲಿದ್ದು ಶೇ.90ರಷ್ಟು ವಿದ್ಯಾರ್ಥಿಗಳ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಿದೆ ಎಂದು ತಿಳಿಸಿದರು.

ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ನ ಆಡಳಿತಾಧಿಕಾರಿ ಪ್ರಸನ್ನ ಕುಮಾರ್, ಉಪನ್ಯಾಸಕರಾದ ರವೀಂದ್ರ, ಪಾಲರಾಜ್ ಹಾಗೂ ರುಕ್ಮಿಣಿ ಚಂದ್ರನ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

comments

Related Articles

error: