ಮೈಸೂರು

ಅಂತಾರಾಷ್ಟ್ರೀಯ ವಿಚಾರ ಸಂಕಿರಣ ರೇಸ್-17 -‘ಜ.20 ಮತ್ತು 21ರಂದು’

ಮೈಸೂರಿನ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ನಿಂದ ‘ಟ್ರೆಂಡ್ ಸೆಟಿಂಗ್ ಸ್ಟ್ರಕ್ಚರ್ಸ್’  ‘ರೇಸ್‍-17’ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಆರ್.ಸುಂದರಮೂರ್ತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಂಗಳವಾರ, ಪತ್ರಕರ್ತರ ಭವನದಲ್ಲಿ ಮಾತನಾಡಿ ಇದೇ ಜ.20 ಮತ್ತು 21ರಂದು ನಿತ್ಯೋತ್ಸವ ಕನ್‍ವೆನ್ಶನ್ ಸೆಂಟರ್‍ ಅಲ್ಲಿ ನಡೆಯುವ ವಿಚಾರಸಂಕಿರಣದಲ್ಲಿ ಕ್ಷೇತ್ರದ ತಜ್ಞರಾದ ಗ್ವಾಲಿಯರ್‍ನ ಭಾರತೀಯ ತಂತ್ರಜ್ಞಾನ ಮಾಹಿತಿ ಮತ್ತು ಮ್ಯಾನೇಜ್‍ಮೆಂಟ್ ಸಂಸ್ಥೆಯ ಡಾ.ವಿ.ಶೇಷಾದ್ರಿ ಮುಖ್ಯ ಅತಿಥಿಯಾಗಿರುವರು. ಅಜಿತ್ ಸಬ್‍ನಿಸ್ ಅಧ್ಯಕ್ಷತೆಯಲ್ಲಿ  ನಡೆಯುವ ವಿಚಾರಗೋಷ್ಠಿಯಲ್ಲಿ ಬೆಂಗಳೂರಿನ ಬಿ.ಎಂ.ಎಸ್. ಇನ್ಸಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್‍ಮೆಂಟ್‍ನ ಡಾ.ಅರವಿಂದ ಭಾಶ್ಯಮ್ ಇವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.  ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ತಾಂತ್ರಿಕ ಮಾಹಿತಿಯನ್ನು ನಿರಂಜನ್ ಸಿಂಹ ನೀಡುವರು. ಹೆಚ್.ರಜನೀಶ್ ಕಾಂಕ್ರೀಟ್ ಸೇತುವೆಗಳ ಬಗ್ಗೆ,  ಡಾ.ಸುಧೀರ್‍ ಕುಮಾರ್ ಬರೈ ಡಾ.ಗಿರೀಶ್ ದ್ರಾವಿಡ್, ಕೌಸ್ತವ್ ಘೋಶ್ ಹಾಗೂ ಇತರರು ವಿಚಾರ ಮಂಡಿಸಲಿದ್ದಾರೆ ಎಂದರು.    ನೆರೆಯ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಕೊಲ್ಕತ್ತಾ, ಮಹಾರಾಷ್ಟ್ರ ಸೇರಿದಂತೆ ಒಟ್ಟು 250ಕ್ಕೂ ಹೆಚ್ಚು ಇಂಜಿನಿಯರ್‍ಗಳು ಭಾಗವಹಿಸುವರು ಎಂದು ತಿಳಿಸಿದರಲ್ಲದೇ,  ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಸರು ನೋಂದಾಯಿಸಿಕೊಳ್ಳಲು 9845248274, 98452 48275 ಅನ್ನು ಸಂಪರ್ಕಿಸಬೇಕಾಗಿ ಕೋರಿದರು.

ಕಾರ್ಯಕಾರಿ ಸಮಿತಿ ಅಧ್ಯಕ್ಷ ಎಸ್.ಪ್ರಕಾಶ್, ಬದ್ರಿನಾಥ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: