ಮೈಸೂರು

ಫೆಬ್ರವರಿ 13 ರಿಂದ ಭ್ರಷ್ಟಾಚಾರ ನಿಗ್ರಹ ದಳದಿಂದ ದೂರು ಸ್ವೀಕಾರ

ಮೈಸೂರು, ಫೆ.8:-  ಸರ್ಕಾರಿ ಕಛೇರಿಗಳಲ್ಲಿ ಸಾರ್ವಜನಿಕರ ಕೆಲಸ ನಿರ್ವಹಿಸುವಲ್ಲಿ ಅಧಿಕೃತ ವಿಳಂಬ, ಲಂಚಕ್ಕಾಗಿ ಒತ್ತಾಯ ಹಾಗೂ ಇನ್ನಿತರ ರೀತಿಯಲ್ಲಿ ತೊಂದರೆ ನೀಡುತ್ತಿರುವ ಅಧಿಕಾರಿ/ನೌಕರರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ, ಮೈಸೂರು ಜಿಲ್ಲೆಯ ಪೊಲೀಸ್ ಉಪಾಧೀಕ್ಷಕರವರು ತಾಲೂಕುಗಳಲ್ಲಿ ವಿವಿಧ ದಿನಾಂಕಗಳಂದು ಸಾರ್ವಜನಿಕರಲ್ಲಿ ಭ್ರಷ್ಟಾಚಾರದ ಬಗ್ಗೆ ಅರಿವು ಮೂಡಿಸುವ ಮತ್ತು ದೂರನ್ನು ಸ್ವೀಕರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ.

ಫೆಬ್ರವರಿ 13 ರಂದು ಬೆಳಿಗ್ಗೆ 11.30 ರಿಂದ 1.30 ಗಂಟೆಯವರೆಗೆ ಕೆ.ಆರ್.ನಗರ ತಾಲೂಕಿನ ಪರಿವೀಕ್ಷಣಾ ಮಂದಿರದಲ್ಲಿ ನಡೆಯಲಿದೆ.

ಫೆಬ್ರವರಿ 13 ರಂದು ಮಧ್ಯಾಹ್ನ 3 ರಿಂದ 4.30 ಗಂಟೆಯವರೆಗೆ ಹುಣಸೂರು ಪರಿವೀಕ್ಷಣಾ ಮಂದಿರದಲ್ಲಿ ನಡೆಯಲಿದೆ.  ಫೆಬ್ರವರಿ 14 ರಂದು ಬೆಳಿಗ್ಗೆ 11.30 ರಿಂದ 1.30 ಗಂಟೆಯವರೆಗೆ ಪಿರಿಯಾಪಟ್ಟಣ ಪರಿವೀಕ್ಷಣಾ ಮಂದಿರದಲ್ಲಿ ನಡೆಯಲಿದೆ.

ಫೆಬ್ರವರಿ 15 ರಂದು ಬೆಳಿಗ್ಗೆ 11.30 ರಿಂದ 1 ಗಂಟೆಯವರೆಗೆ ಹೆಚ್.ಡಿ.ಕೋಟೆ ಪರಿವೀಕ್ಷಣಾ ಮಂದಿರ ಮತ್ತು ಮಧ್ಯಾಹ್ನ 3 ರಿಂದ 4.30 ಗಂಟೆಯವರೆಗೆ ಸರಗೂರು ಪರಿವೀಕ್ಷಣಾ ಮಂದಿರದಲ್ಲಿ ನಡೆಯಲಿದೆ.

ಫೆಬ್ರವರಿ 16 ರಂದು ಬೆಳಿಗ್ಗೆ 11.30 ರಿಂದ 1.30 ಗಂಟೆಯವರೆಗೆ ನಂಜನಗೂಡು ಪರಿವೀಕ್ಷಣಾ ಮಂದಿರ,

ಫೆಬ್ರವರಿ 13 ರಂದು ಮಧ್ಯಾಹ್ನ  3 ರಿಂದ 4.30 ಗಂಟೆಯವರೆಗೆ ಟಿ.ನರಸೀಪುರ ಪರಿವೀಕ್ಷಣಾ ಮಂದಿರದಲ್ಲಿ ನಡೆಯಲಿದೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮೈಸೂರು ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರು ತಿಳಿಸಿರುತ್ತಾರೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: