ಕರ್ನಾಟಕತುರ್ತು ಮಾಹಿತಿ

ಹಂಪಿ ಸ್ಮಾರಕ ಧ್ವಂಸ: ನಾಲ್ವರು ಪೊಲೀಸರ ವಶಕ್ಕೆ

ಬಳ್ಳಾರಿ,ಫೆ.8-ವಿಶ್ವವಿಖ್ಯಾತ ಹಂಪಿಯ ವಿಷ್ಣು ದೇವಾಲಯದ ಬಳಿಯ ಕಂಬವನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಿಹಾರ ಮೂಲದ ಆಯುಷ್‌ ಸಾಹು (24), ರಾಜಬಾಬು (21), ರಾಜೇಶ್‌ ಚೌಧರಿ ಹಾಗೂ ಮಧ್ಯಪ್ರದೇಶ ಮೂಲದ ರಾಜ್‌ ಆರ್ಯನ್‌ (22) ವಶಕ್ಕೆ ಪಡೆದಿದ್ದಾರೆ.

ಎಲ್ಲರೂ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಓರ್ವ ಬಿಇ ಮುಗಿಸಿದ್ದು, ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾನೆ. ಘಟನೆ ವೇಳೆ ಒಟ್ಟು ಐದು ಮಂದಿ ಇದ್ದು, ಕಂಬ ಧ್ವಂಸಗೊಳಿಸುವ ವೇಳೆ ನಾಲ್ವರು ಇದ್ದರು. ಮೂವರು ಕಂಬ ಧ್ವಂಸಗೊಳಿಸಿದರೆ ಮತ್ತೊಬ್ಬ ಇದನ್ನು ವಿಡಿಯೋ ಮಾಡಿದ್ದಾನೆ. ಮತ್ತೊಬ್ಬ ಬೇರೆಡೆ ಇದ್ದ ಕಾರಣ ಆತನನ್ನು ಪ್ರಕರಣದಿಂದ ಹೊರಗಿಡಲಾಗಿದೆ ಎಂದು ಎಸ್ಪಿ ಅರುಣ್ ರಂಗರಾಜನ್ ತಿಳಿಸಿದ್ದಾರೆ.

ವಶಕ್ಕೆ ಪಡೆದವರ ಪೈಕಿ ಇಬ್ಬರನ್ನು ಬೆಂಗಳೂರಿನಿಂದ ಹಾಗೂ ಮತ್ತೊಬ್ಬನನ್ನು ಹೈದ್ರಾಬಾದ್‌ನಿಂದ ಕರೆತರಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದಿದ್ದೇವಷ್ಟೆ. ಇನ್ನೂ ಬಂಧನ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ ಎಂದು ಎಸ್ಪಿ ಸ್ಪಷ್ಟನೆ ನೀಡಿದರು. (ಎಂ.ಎನ್)

 

Leave a Reply

comments

Related Articles

error: