ದೇಶಪ್ರಮುಖ ಸುದ್ದಿ

ತಮಿಳುನಾಡು ಮುಖ್ಯಮಂತ್ರಿ ದಿ.ಜಯಲಲಿತಾ ರಕ್ತ ಸಂಬಂಧಿ ದೀಪಾ ಜಯಕುಮಾರ್ ರಾಜಕೀಯ ಪ್ರವೇಶ

ಪುರುಚ್ಚಿ ತಲೈವಿ ಜಯಲಲಿತಾ ನಿಧನ ನಂತರ ತಮಿಳುನಾಡಿನಲ್ಲಿ ತೆರವಾಗಿದ್ದ ಅಮ್ಮನ ಸ್ಥಾನವನ್ನು ತುಂಬಲು ಜಯಲಲಿತಾ ರಕ್ತಸಂಬಂಧಿ ದೀಪಾ ಜಯಕುಮಾರ್ ರಾಜಕೀಯರಂಗ ಪ್ರವೇಶಿಸುವ ಮೂಲಕ ಪರಮಾಪ್ತೆ ಶಶಿಕಲಾಗೆ ದೊಡ್ಡ ಶಾಕ್ ನೀಡಿದ್ದಾರೆ.

ಚೆನ್ಹೈನ ಮರೀನಾ ಕಡಲತೀರದಲ್ಲಿರುವ ಡಾ.ಎಂ.ಜಿ.ರಾಮಚಂದ್ರನ್ ಹಾಗೂ ಜಯಲಲಿತಾ ಅವರ ಸಮಾಧಿಗೆ ಶ್ರದ್ಧಾಂಜಲಿ ಸಲ್ಲಿಸಿ ನಂತರ ಬೃಹತ್ ಸಮಾರಂಭದಲ್ಲಿ ತಮ್ಮ ರಾಜಕೀಯ ಪ್ರವೇಶವನ್ನು ಘೋಷಿಸಿದರು. ದೀಪಾ ರಾಜಕೀಯ ಪ್ರವೇಶವನ್ನು ಘೋಷಿಸಿದಾಕ್ಷಣವೇ ಶಶಿಕಲಾ ವಿರೋಧಿಗಳು ಹಾಗೂ ಅಮ್ಮನ ಕಟ್ಟ ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲವಾಗಿದ್ದು ಅದ್ದೂರಿ, ಪ್ರಚಂಡ ಕರತಾಡನ ನೀಡುವ ಮೂಲಕ ಶಶಿಕಲಾ ವಿರುದ್ಧವಿದ್ದ ತಮ್ಮ ಅಸಮಾಧಾನವನ್ನು ಕಾರ್ಯಕರ್ತರು ಹೊರಹಾಕಿದ್ದಾರೆ.

ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಅಣ್ಣನ ಮಗಳಾದ ದೀಪಾ ಜಯಕುಮಾರ್, ಸೋದರತ್ತೆಯನ್ನೇ ಹೋಲುವ 42 ವರ್ಷದ ದೀಪಾ ಇಂದು ಅಧಿಕೃತವಾಗಿ ಎಐಎಡಿಎಂಕೆಗೆ ಸೇರ್ಪಡೆಯಾಗುತ್ತಿದ್ದು ತಮಿಳಿಗರಿಗೆ ಹೊಸ ಆಶಾಕಿರಣವೊಂದು ಮೂಡಿಸಿದ್ದು, ಉಜ್ವಲ ರಾಜಕೀಯ ಭವಿಷ್ಯವನ್ನು ಹೊಂದುವರು ಎನ್ನುವುದು ತಜ್ಞರ ಅಭಿಪ್ರಾಯ. ಜಯಲಲಿತಾ ನಿಧನದ ನಂತರದಿಂದಲೇ ದೀಪಾರಲ್ಲಿ ಅಮ್ಮನನ್ನು ಕಾಣುತ್ತಿದ್ದ ಅಭಿಮಾನಿಗಳು ಈಕೆಯ ರಾಜಕೀಯ ಪ್ರವೇಶವೂ ಸಂತಸ ಮೂಡಿಸಿದ್ದು, ಮರೆಯಾದ ಅಮ್ಮನನ್ನು ದೀಪಾರಲ್ಲಿ ಕಾಣುತ್ತೇವೆ ಎಂದು ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ತಿಳಿಸಿದ್ದಾರೆ. ಅಲ್ಲದೇ ಈಗಾಗಲೇ ರಾಜ್ಯದೆಲ್ಲೆಡೆ ಪುರುಚ್ಚಿ ತಲೈವಿ ಜಯಲಲಿತಾರೊಂದಿಗೆ ಇವರ ಭಾವಚಿತ್ರಗಳು ಗೋಚರಿಸುತ್ತಿವೆ.

 

Leave a Reply

comments

Related Articles

error: