ಮೈಸೂರು

ಡಾ.ಕೃಷ್ಣಯ್ಯ ಗೌಡರ ಅಭಿನಂದನೆ : ವಿಚಾರ ಸಂಕಿರಣ

ಮೈಸೂರು,ಫೆ.8 : ಅರ್ಥಶಾಸ್ತ್ರ ಬರಹಗಾರರು, ಇಂಟರ್ ನ್ಯಾಷನಲ್ ಕೌನ್ಸಿಲ್ ಫಾರ್ ಡೆವಲಪ್ ಮೆಂಟ್ ರಿಸರ್ಚ್ ನಿರ್ದೇಶಕರಾದ ಡಾ.ಎಚ್.ಆರ್.ಕೃಷ್ಣಯ್ಯಗೌಡ ಅವರ ಅಭಿನಂದನೆ ಮತ್ತು ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ನಾಳೆ ಬೆಳಗ್ಗೆ 10 ಗಂಟೆಗೆ ಸೆನೆಟ್ ಭವನದಲ್ಲಿ ಏರ್ಪಡಿಲಾಗಿದೆ.

ಮೈವಿವಿಯ ಪ್ರಾಚ್ಯ ವಿದ್ಯಾ ಸಂಶೋಧನಾಲಯ, ಅಂತರಾಷ್ಟ್ರೀಯ ಅಭಿವೃದ್ಧಿ ಸಂಶೋಧನಾ ಪರಿಷತ್ ಸಹಯೋಗದಲ್ಲಿ ‘ಕೌಟಿಲ್ಯನ ಅರ್ಥಶಾಸ್ತ್ರ ಮತ್ತು ಕರ್ನಾಟಕದ ಆರ್ಥಿಕ ಚಿಂತಕರು ವಿಚಾರ ಸಂಕಿರಣ ಮಾಲಿಕೆ-1 ಯನ್ನು  ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಉದ್ಘಾಟಿಸುವರು. ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಧ್ಯಕ್ಷತೆ, ಶಾಸಕ ಮರಿತಿಬ್ಬೇಗೌಡರಿಂದ ಪುಸ್ತಕ ಪ್ರದರ್ಶನ ಉದ್ಘಾಟನೆ. ಸಂದೇಶ್ ನಾಗರಾಜು ಮತ್ತಿರರು ಇರಲಿದ್ದಾರೆ.

ಸಂಜೆ.4.15ಕ್ಕೆ ಸಮಾರೋಪದಲ್ಲಿ ಪೂಜಾ ಭಾಗವತ್ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಸಿ.ಕೆ.ರೇಣುಕಾರ್ಯ ಸಮಾರೋಪ ಭಾಷಣ, ಮೈವಿವಿ ಪ್ರಾಚ್ಯ ವಿದ್ಯಾ ಸಂಶೋಧನಾಲಯ ನಿರ್ದೇಶಕ ಡಾ.ಎಸ್.ಶಿವರಾಜಪ್ಪ ಅಧ್ಯಕ್ಷತೆ. ಇತರರು ಇರುವರು. (ಕೆ.ಎಂ.ಆರ್)

Leave a Reply

comments

Related Articles

error: